ADVERTISEMENT

ನವೆಂಬರ್‌ 30ರಿಂದ ಡಿಸೆಂಬರ್ 15ರವರೆಗೆ ‘ಬೆಂಗಳೂರು ಹಬ್ಬ’

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:55 IST
Last Updated 23 ನವೆಂಬರ್ 2024, 15:55 IST
   

ಬೆಂಗಳೂರು: ನಗರದ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಪ್ರೀತಿಯನ್ನು ಬಿಂಬಿಸುವ ‘ಬೆಂಗಳೂರು ಹಬ್ಬ’ದ ಎರಡನೇ ಆವೃತ್ತಿ ಇದೇ 30ರಿಂದ ಡಿಸೆಂಬರ್ 15ರವರೆಗೆ ನಡೆಯಲಿದೆ.

ಅನ್‌ಬಾಕ್ಸಿಂಗ್‌ ಬೆಂಗಳೂರು ಪ್ರತಿಷ್ಠಾನವು ರಾಜ್ಯ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು ಹಬ್ಬ ಆಯೋಜಿಸುತ್ತಿದೆ. 16 ದಿನಗಳ ಹಬ್ಬದ ಭಾಗವಾಗಿ ನಗರದ 40 ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ವಿವಿಧ ಮಳಿಗೆಗಳು ಸೇರಿ 500ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಅನ್‌ಬಾಕ್ಸಿಂಗ್‌ ಬೆಂಗಳೂರು ಪ್ರತಿಷ್ಠಾನ ಹೇಳಿದೆ.

ADVERTISEMENT

ಹೆಚ್ಚಿನ ಮಾಹಿತಿಗೆ https://blrhubba.in ಜಾಲತಾಣವನ್ನು ಪರಿಶೀಲಿಸಬಹುದು.

ಹಬ್ಬದ ಪ್ರಮುಖ ಸ್ಥಳಗಳು

  • ಸ್ವಾತಂತ್ರ್ಯ ಉದ್ಯಾನ

  • ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ (ಬಿಐಸಿ)

  • ಮಲ್ಲೇಶ್ವರದ ಪಂಚವಟಿ

  • ಕಾಮರಾಜ ರಸ್ತೆಯ ಸಭಾ

ಕಾರ್ಯಕ್ರಮಗಳು

  • ಗೋಡೆ ಚಿತ್ರ, ಕಲಾ ಪ್ರದರ್ಶನ, ನಾಟಕ, ಸಂಗೀತ ಕಾರ್ಯಕ್ರಮ

  • ನಗರದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ‘ಬೆಂಗಳೂರು ಚಾಲೆಂಜ್‌’

  • ಬೊಂಬೆಯಾಟ

  • 38 ಕಲಾವಿದರ ತಂಡದಿಂದ ಬೃಹತ್ ಜಾನಪದ ಮೇಳ

  • ಕುವೆಂಪು ಅವರ 120ನೇ ಜನ್ಮ ಶತಮಾನೋತ್ಸವದ ಅಂಗವಾಗಿ ‘ಗಲ ಗಲ ಗದ್ದಲ’ ಕಾರ್ಯಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.