ADVERTISEMENT

ಕೆ.ಆರ್.ಪುರ: ನಗರೇಶ್ವರ ನಾಗೇನಹಳ್ಳಿಗೆ ಕಾವೇರಿ ನೀರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 16:13 IST
Last Updated 8 ಡಿಸೆಂಬರ್ 2024, 16:13 IST
ಶಾಸಕ ಬೈರತಿ ಬಸವರಾಜ ಅವರು ಕೊಳವೆಗಳಿಗೆ ಪೂಜೆ ಸಲ್ಲಿಸಿ ನೀರು ಹರಿಸಿದರು. ಮುಖಂಡರಾದ ನಾಗೇನಹಳ್ಳಿ ಲೋಕೇಶ್ , ಬೈರತಿ ಗಣೇಶ್, ಶ್ರೀನಿವಾಸ್ ಗೌಡ ಇದ್ದರು.
ಶಾಸಕ ಬೈರತಿ ಬಸವರಾಜ ಅವರು ಕೊಳವೆಗಳಿಗೆ ಪೂಜೆ ಸಲ್ಲಿಸಿ ನೀರು ಹರಿಸಿದರು. ಮುಖಂಡರಾದ ನಾಗೇನಹಳ್ಳಿ ಲೋಕೇಶ್ , ಬೈರತಿ ಗಣೇಶ್, ಶ್ರೀನಿವಾಸ್ ಗೌಡ ಇದ್ದರು.   

ಕೆ.ಆರ್.ಪುರ: ಸಮೀಪದ ನಗರೇಶ್ವರ ನಾಗೇನಹಳ್ಳಿಯಲ್ಲಿ ಜಲಮಂಡಳಿ ವತಿಯಿಂದ ಮನೆಮನೆಗೆ ಕಾವೇರಿ ನೀರು ಪೂರೈಸುವ ಕಾರ್ಯಕ್ರಮಕ್ಕೆ ಶಾಸಕ ಬೈರತಿ ಬಸವರಾಜ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ವ್ಯಾಪ್ತಿಗೆ ಕೆ.ಆರ್.ಪುರದ ಹನ್ನೊಂದು ಹಳ್ಳಿಗಳು ಒಳಗೊಂಡಿದ್ದು ನಗರೇಶ್ವರ ನಾಗೇನಹಳ್ಳಿಯೂ ಸೇರಿದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಬವಣೆ ವ್ಯಾಪಕವಾಗಿತ್ತು. ಕೊಳವೆ ಬಾವಿ ಕೊರೆಸಿದರೂ ನೀರು ದೊರಕುತ್ತಿರಲಿಲ್ಲ. ನೀರಿನ ಹಾಹಾಕಾರ ಹೆಚ್ಚಾಗಿತ್ತು. ಬೇಸಿಗೆಯಲ್ಲಂತೂ ಟ್ಯಾಂಕರ್ ಮೊರೆ ಹೋಗುವ ಪರಿಸ್ಥಿತಿ ಇತ್ತು. ಇದನ್ನೆಲ್ಲ ಮನಗಂಡು ಜಲಮಂಡಳಿ ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ಮಾಡಿ ಸಂಪರ್ಕ ಸಾಧಿಸಿ ನೀರಿನ ಬವಣೆ ತೀರಿಸಲು ಸಂಕಲ್ಪ ಮಾಡಿದ್ದೆ. ಈಗ ಸಮಸ್ಯೆಗೆ ಮುಕ್ತಿ ಸಿಕ್ಕಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇನ್ನುಳಿದ ಹಳ್ಳಿಗಳಿಗೆ ನೀರು ಪೂರೈಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗೇನಹಳ್ಳಿ ಲೋಕೇಶ್, ಮುಖಂಡರಾದ ಬೈರತಿ ಗಣೇಶ್, ಶ್ರೀನಿವಾಸ್ ಗೌಡ, ಗಣೇಶ್ ರೆಡ್ಡಿ, ಕೃಷ್ಣಮೂರ್ತಿ, ಮಹೇಶ್, ರಾಮೇಗೌಡ, ಸತೀಶ್, ರಾಮಚಂದ್ರ, ವೆಂಕಟೇಶ್ ರೆಡ್ಡಿ, ಪಿ.ಗೌಡ, ರಾಜಶೇಖರ್ ರೆಡ್ಡಿ, ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.