
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಪತ್ನಿಯ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದ ಆರೋಪದಡಿ ಪತಿಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್ಇ) ನಗರ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಜೆಡ್ರೆಲಾ ಜಾಕೂಬ್ ಬಂಧಿತ ಆರೋಪಿ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಜಾಕೂಬ್ ಆಂಧ್ರಪ್ರದೇಶದ ನೆಲ್ಲೂರಿನವರು. ಎರಡು ವರ್ಷಗಳ ಹಿಂದೆ ದೂರುದಾರೆಯನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ 11 ತಿಂಗಳ ಮಗುವಿದೆ. ಇಬ್ಬರೂ ಉತ್ತಮವಾಗಿ ಜೀವನ ನಡೆಸುತ್ತಿದ್ದರು. ವೃತ್ತಿಗಾಗಿ ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗೆ ಯುವತಿಯ ಪರಿಚಯವಾಗಿತ್ತು. ಅದಾದ ಮೇಲೆ ಪತ್ನಿಯನ್ನು ಕಡೆಗಣಿಸಿದ್ದರು ಎಂದು ಪೊಲೀಸರು ತಿಳಿಸಿದರು.
ನಗರಕ್ಕೆ ಬಂದ ಆರೋಪಿಯು ಭೋಪಾಲ್‌ನ ಮಹಿಳೆಯನ್ನು ಪ್ರೀತಿಸಿದ್ದರು. ಈ ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಬಿಟಿಎಂ ಲೇಔಟ್ನಲ್ಲಿ ಇರುವ ಮನೆಯಲ್ಲಿ ಆರೋಪಿ ವಾಸ್ತವ್ಯ ಹೂಡಿದ್ದರು. ಅದನ್ನು ಅರಿತ ಆರೋಪಿಯನ್ನು ಪತ್ನಿ ಪ್ರಶ್ನಿಸಿದಾಗ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.