ADVERTISEMENT

ಆನ್‌ಲೈನ್ ಮದ್ಯ: ₹ 89,545 ಕಳೆದುಕೊಂಡ ಬೆಂಗಳೂರು ನಿವಾಸಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 20:27 IST
Last Updated 4 ಜೂನ್ 2022, 20:27 IST
ಮದ್ಯ
ಮದ್ಯ   

ಬೆಂಗಳೂರು: ಆನ್‌ಲೈನ್‌ ಮೂಲಕ ಮದ್ಯ ಖರೀದಿಸಲು ಮುಂದಾಗಿದ್ದ ನಗರದ ನಿವಾಸಿಯೊಬ್ಬರು ₹ 89,545 ಕಳೆದುಕೊಂಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

‘ಜೆ.ಪಿ.ನಗರ 4ನೇ ಹಂತದ ನಿವಾಸಿ ಶ್ರೀರಾಮ್ ಅವರಿಗೆ ವಂಚನೆ ಆಗಿದೆ. ಅವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆನ್‌ಲೈನ್ ಮದ್ಯ ಮಾರಾಟ ಮಳಿಗೆಗಾಗಿ ಜಾಲತಾಣವೊಂದರಲ್ಲಿ ಹುಡುಕಾಟ ನಡೆಸಿದ್ದರು. ಅಲ್ಲಿ ದೂರೆತ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಮದ್ಯ ಕಾಯ್ದಿರಿಸಿದ್ದರು. ಮದ್ಯವನ್ನು ಕಳುಹಿಸುವುದಾಗಿ ಹೇಳಿದ್ದ ಆರೋಪಿಗಳು, ಡೆಬಿಟ್ ಕಾರ್ಡ್ ಹಾಗೂ ಒಟಿಪಿ ಪಡೆದುಕೊಂಡಿದ್ದರು. ನಂತರ, ದೂರುದಾರರ ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ₹ 89,545 ಕಡಿತವಾಗಿದೆ’ ಎಂದೂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.