ADVERTISEMENT

Bengaluru Metro | ಹಳದಿ ಮಾರ್ಗ: ನಗರ ತಲುಪಿದ ಮತ್ತೊಂದು ಬೋಗಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 14:36 IST
Last Updated 13 ಆಗಸ್ಟ್ 2025, 14:36 IST
ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪೂರೈಕೆಯಾಗಿರುವ ನಾಲ್ಕನೇ ರೈಲಿನ ಒಂದು ಬೋಗಿ ಹೆಬ್ಬಗೋಡಿ ಡಿಪೊಗೆ ತಲುಪಿದೆ
ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪೂರೈಕೆಯಾಗಿರುವ ನಾಲ್ಕನೇ ರೈಲಿನ ಒಂದು ಬೋಗಿ ಹೆಬ್ಬಗೋಡಿ ಡಿಪೊಗೆ ತಲುಪಿದೆ   

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ನಾಲ್ಕನೇ ರೈಲಿನ ಒಂದು ಬೋಗಿ ಬುಧವಾರ ನಗರಕ್ಕೆ ತಲುಪಿದೆ. ಇನ್ನುಳಿದ ಐದು ಬೋಗಿಗಳು ಎರಡು ದಿನಗಳಲ್ಲಿ ತಲುಪಲಿವೆ.

ಪಶ್ಚಿಮ ಬಂಗಾಳದ ಟಿಟಾಗಢದಿಂದ ಎರಡು ವಾರಗಳ ಹಿಂದೆ ರವಾನೆಯಾಗಿತ್ತು. ಮಳೆಯಿಂದಾಗಿ ನಗರಕ್ಕೆ ತಲುಪುವುದು ತಡವಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಳದಿ ಮಾರ್ಗದಲ್ಲಿ ಸದ್ಯ ಮೂರು ರೈಲುಗಳು ಸಂಚರಿಸುತ್ತಿವೆ. ನಾಲ್ಕನೇ ರೈಲಿನ ಎರಡು ಬೋಗಿಗಳನ್ನು ಟಿಟಾಗಢದಿಂದ ಜುಲೈ 28ರಂದು ರಾತ್ರಿ ಕಳುಹಿಸಲಾಗಿತ್ತು. ಉಳಿದ ನಾಲ್ಕು ಬೋಗಿಗಳನ್ನು ಆಗಸ್ಟ್‌ 1ರಂದು ಕಳುಹಿಸಲಾಗಿತ್ತು. ಆಗಸ್ಟ್‌ 10ರ ಒಳಗೆ ಎಲ್ಲ ಬೋಗಿಗಳು ತಲುಪುವ ನಿರೀಕ್ಷೆ ಇತ್ತು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಎಲ್ಲ ಆರು ಬೋಗಿಗಳು ತಲುಪಿದ ಬಳಿಕ ಪರೀಕ್ಷೆಗಳನ್ನು ನಡೆಸಬೇಕು. ಈಗ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಇರುವುದರಿಂದ ಹಗಲು ಹೊತ್ತಿನಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ. ರಾತ್ರಿ ವೇಳೆ ಪರೀಕ್ಷೆಗಳನ್ನು ನಡೆಸಲಾಗುವುದು. ಮುಂದಿನ ತಿಂಗಳು ನಾಲ್ಕನೇ ರೈಲು ವಾಣಿಜ್ಯ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ವಿವರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.