ADVERTISEMENT

ಮೆಟ್ರೊ ಹಳದಿ ಮಾರ್ಗದಲ್ಲಿ 25 ನಿಮಿಷಕ್ಕೊಂದು ರೈಲು: ದಟ್ಟಣೆ, ಪ್ರಯಾಣಿಕರ ಅಳಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2025, 7:07 IST
Last Updated 11 ಆಗಸ್ಟ್ 2025, 7:07 IST
<div class="paragraphs"><p>ಹಳದಿ ಮಾರ್ಗದಲ್ಲಿ ಉಂಟಾದ ಉಂಟಾದ ಪ್ರಯಾಣಿಕರ ದಟ್ಟಣೆ</p></div>

ಹಳದಿ ಮಾರ್ಗದಲ್ಲಿ ಉಂಟಾದ ಉಂಟಾದ ಪ್ರಯಾಣಿಕರ ದಟ್ಟಣೆ

   

ಬೆಂಗಳೂರು: ನಿನ್ನೆ ಉದ್ಘಾಟನೆಯಾದ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲುಗಳ ಟ್ರಿಪ್‌ನಲ್ಲಿ ಭಾರಿ ಅಂತರ ಇರುವುದರಿಂದ ನಿಲ್ದಾಣ ಹಾಗೂ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ.

ಈ ಕುರಿತು ಅನೇಕರು ಫೇಸ್‌ಬುಕ್, ಎಕ್ಸ್‌ನಲ್ಲಿ ಜನದಟ್ಟಣೆ ಬಗ್ಗೆ ನೋವು ತೋಡಿಕೊಳ್ಳುತ್ತಿದ್ದಾರೆ.

ADVERTISEMENT

‘19 ಕಿ.ಮೀ ದೂರವನ್ನು ಕೇವಲ 33 ನಿಮಿಷದಲ್ಲಿ ತಲುಪುತ್ತಿದ್ದೇವೆ. ವ್ಯವಸ್ಥೆ ಅದ್ಭುತವಾಗಿದೆ. ಆದರೆ, ಎರಡೂ ಕಡೆ ಭಾರಿ ದಟ್ಟಣೆ ಉಂಟಾಗುತ್ತಿದೆ’ ಎಂದು ಪ್ರಯಾಣಿಕರೊಬ್ಬರು ಅಲವತ್ತುಕೊಂಡಿದ್ದಾರೆ.

‘ಮೊದಲ ದಿನ ಪ್ರಯಾಣ ಅನುಭವ ಕೆಟ್ಟದಾಗಿತ್ತು. ಇದಕ್ಕೆ ಟ್ರಿಪ್ ಅಂತರವೇ ಕಾರಣ. ಆದಷ್ಟು ಬೇಗ ಬಿಎಂಆರ್‌ಸಿಎಲ್ ಹೆಚ್ಚಿನ ರೈಲುಗಳನ್ನು ಓಡಿಸಬೇಕು’ ಎಂದು ಮನವಿ ಮಾಡಿದ್ದಾರೆ. ಇದೇ ರೀತಿ ಹಲವರು ಹಳದಿ ಮಾರ್ಗದಲ್ಲಿ ದಟ್ಟಣೆಯ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೆಚ್ಚು ರೈಲು ಬೋಗಿಗಳು ಪೂರೈಕೆಯಾಗುತ್ತಿದ್ದಂತೆ, ರೈಲುಗಳ ಟ್ರಿಪ್‌ ಹೆಚ್ಚಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌.ವಿ.ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಆ.11ರಂದು ಪ್ರಯಾಣಿಕರಿಗಾಗಿ ರೈಲುಗಳ ಸಂಚಾರ ಆರಂಭವಾಗಿವೆ. ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. 

ಎರಡು ಟರ್ಮಿನಲ್‌ ಸೇರಿ ಎಲ್ಲ 16 ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 11.15ಕ್ಕೆ ಮತ್ತು ಆರ್.ವಿ.ರಸ್ತೆ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.50ಕ್ಕೆ ಹೊರಡುತ್ತದೆ. ಬೆಳಿಗ್ಗೆ 6.30 ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹಾಗೂ ಬೆಳಿಗ್ಗೆ 7.10 ರಿಂದ ಆರ್.ವಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ರಾತ್ರಿ 10 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

ಪ್ರತಿ ಭಾನುವಾರ ರೈಲು ಸಂಚಾರ ಬೆಳಿಗ್ಗೆ 6.30ರ ಬದಲಾಗಿ 7ಕ್ಕೆ ಪ್ರಾರಂಭವಾಗಲಿದೆ. ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ ₹60 ಆಗಿದೆ.  ಟೋಕನ್‌, ಎನ್‌ಸಿಎಂಸಿ ಕಾರ್ಡ್‌, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌, ಕ್ಯೂಆರ್‌ ಟಿಕೆಟ್‌ ಲಭ್ಯವಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.