
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿ ಕೊಂಡಿರುವುದರಿಂದ ನ.23ರಂದು ಯಲಹಂಕ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4.30ರ ವರೆಗೆ, ಅಬ್ಬಿಗೆರೆ ಉಪಕೇಂದ್ರ ಮತ್ತು ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
‘ಕೆಎಂಎಫ್, ವೈಎನ್‌ಕೆ ನ್ಯೂ ಟೌನ್, ಅಲ್ಲಾಳಸಂದ್ರ, ಶಾರದಾನಗರ, ಜನಪ್ರಿಯ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ ಸುತ್ತಮುತ್ತ ಕಮ್ಮಗೊಂಡನಹಳ್ಳಿ, ರಾಘವೇಂದ್ರ ಬಡಾವಣೆ, ಲಕ್ಷೀಪುರ, ವಡೇರಹಳ್ಳಿ, ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾ, ಸಿಂಗಾಪುರ, ಅಬ್ಬಿಗೆರೆ, ಪೈಪ್ ಲೈನ್ ರೋಡ್, ನಿಸರ್ಗ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ, ಎಚ್‌ವಿವಿ ಬಡಾವಣೆ, ಕುವೆಂಪು ನಗರ, ಕಾಶಿರಾಮ ನಗರ, ವಡೇರಹಳ್ಳಿ, ಸಿಂಹಾದ್ರಿ ಬಡಾವಣೆ ಸುತ್ತಮುತ್ತ, ಪೀಣ್ಯ 10ನೇ ಮುಖ್ಯರಸ್ತೆ, 11ನೇ ಮುಖ್ಯರಸ್ತೆ ಸಹಿತ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.