ADVERTISEMENT

Bengaluru Rains | ರಸ್ತೆಯಲ್ಲಿ ನೀರು, ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 23:30 IST
Last Updated 11 ಜೂನ್ 2025, 23:30 IST
<div class="paragraphs"><p>ಬೆಂಗಳೂರಲ್ಲಿ ಮಳೆ</p></div>

ಬೆಂಗಳೂರಲ್ಲಿ ಮಳೆ

   

ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಮಂಗಳವಾರ ತಡರಾತ್ರಿ ಸುರಿದ ಮಳೆಯಿಂದ ಹಲವು ರಸ್ತೆಗಳಲ್ಲಿ ನೀರು ತುಂಬಿತ್ತು. ಬುಧವಾರ ಬೆಳಿಗ್ಗೆ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡಕವಿದ ವಾತಾವರಣವಿತ್ತು. ಆಗ್ಗಾಗ್ಗೆ ತುಂತುರು ಮಳೆಯಾಗುತ್ತಿತ್ತು. ಸಂಜೆಯ ವೇಳೆಗೆ ಮಳೆ ರಭಸದಿಂದ ಸುರಿಯಿತು.

ADVERTISEMENT

ವಿ.ನಾಗೇನಹಳ್ಳಿ, ಹೊರಮಾವು, ಬಸವನಪುರ, ಪುಲಕೇಶಿನಗರ, ಹಗದೂರು, ವಿದ್ಯಾರಣ್ಯಪುರ, ಎಚ್‌ಎಎಲ್ ವಿಮಾನ ನಿಲ್ದಾಣ, ಎಚ್‌ಎಸ್‌ಆರ್ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಲಾ ಎರಡು ಸೆಂ.ಮೀ ಮಳೆಯಾಯಿತು.

ಕೆ.ಆರ್. ಪುರ ಮೆಟ್ರೊ ನಿಲ್ದಾಣದಿಂದ ಬೆನ್ನಿಗಾನಹಳ್ಳಿ, ನಾಗವಾರ ವೃತ್ತದಿಂದ ಹೆಬ್ಬಾಳ, ಹಲಸೂರಿನಿಂದ ಕೆ.ಆರ್. ಪುರ, ಮಾರತ್‌ಹಳ್ಳಿಯಿಂದ ಇಬ್ಲೂರು, ಹೋಪ್‌ ಫಾರ್ಮ್‌ನಿಂದ ಬೆಳತ್ತೂರು,  ಹೆಬ್ಬಾಳ ಮೇಲ್ಸೇತುವೆ,  ಸಿದ್ದಾಪುರದಿಂದ ವರ್ತೂರು ಕೋಡಿ, ಹೆಣ್ಣೂರು ಕಡೆಯಿಂದ ಗೆದ್ದಲಹಳ್ಳಿ, ಥಣಿಸಂದ್ರದಿಂದ ಹೆಗಡೆ ನಗರ, ಸಹಕಾರ ನಗರದಿಂದ ಕೊಡಿಗೇಹಳ್ಳಿ, ಜಯಮಹಲ್‌ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. 

ರಸ್ತೆಯಲ್ಲಿ ಹೆಚ್ಚು ನೀರು ನಿಂತಿದ್ದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾದರು. ಸಂಚಾರ ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಲು ಪ್ರಯಾಸಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.