ಸಾಂದರ್ಭಿಕ-ಚಿತ್ರ
– ಎ.ಐ ಚಿತ್ರ
ಬೆಂಗಳೂರು: ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಸ್ಕೂಟರ್ ಹಾಗೂ ಸಿಮೆಂಟ್ ಮಿಶ್ರಣದ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮತ್ತಿಕೆರೆಯ ಬಿ.ಕೆ.ನಗರದ ನಿವಾಸಿ ಆಯುಷಾ ಖಾನಂ (30) ಮೃತಪಟ್ಟ ಉದ್ಯೋಗಿ.
‘ಯಲಹಂಕದಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಯುಷಾ ಖಾನಂ ಅವರು ಕೆಲಸ ಮುಗಿಸಿಕೊಂಡು ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಹೊರವರ್ತುಲ ರಸ್ತೆಯ ಭದ್ರಪ್ಪ ಲೇಔಟ್ ಬಸ್ ನಿಲ್ದಾಣ ಸಮೀಪದ ರಿಲಯನ್ಸ್ ಮಾರ್ಟ್ ಬಳಿ ವೇಗವಾಗಿ ಬಂದ ಸಿಮೆಂಟ್ ಮಿಶ್ರಣ ಮಾಡುವ ವಾಹನವು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ಆಯುಷಾ ಖಾನಂ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಸಂಚಾರ ಪೊಲೀಸರು ಹೇಳಿದರು. ಸ್ಥಳಕ್ಕೆ ಸಂಜಯನಗರ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಅಪಘಾತಕ್ಕೆ ಸಿಮೆಂಟ್ ಮಿಶ್ರಣ ಮಾಡುವ ವಾಹನದ ಚಾಲಕನ ಅಜಾಗರೂಕತೆಯೇ ಕಾರಣವಾಗಿದ್ದು, ಒಡಿಶಾ ಮೂಲದ ದಿಲೀಪ್‌ಕುಮಾರ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.