ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮದ್ಯದ ಅಮಲಿನಲ್ಲಿ ಯುವಕರ ಗುಂಪು ನಗರದ ಕಾಲೇಜುವೊಂದರ ವಿದ್ಯಾರ್ಥಿನಿ ಹಲ್ಲೆ ಮೇಲೆ ನಡೆಸಿದೆ.
ವಿದ್ಯಾರ್ಥಿನಿ ತ್ರಿಷಾ ಗೌಡ ನೀಡಿದ ದೂರು ಆಧರಿಸಿ ಅಲ್ಬಿನ್, ನವನೀತ್ ಮತ್ತು ಇತರರ ವಿರುದ್ಧ ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆ ವೇಳೆ ಕುಸಿದುಬಿದ್ದ ಸ್ನೇಹಿತೆಗೆ ಹಣ್ಣಿನ ರಸ ತರಲು ತ್ರಿಷಾ ಅವರು ಅಚ್ಯುತ್ ನಗರಕ್ಕೆ ಬಂದಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ವಿದ್ಯಾರ್ಥಿಗಳ ಗುಂಪು, ಆಕೆಯನ್ನು ನಿಂದಿಸಿ, ರ್‍ಯಾಂಗಿಂಗ್ ಮಾಡಲು ಯತ್ನಿಸಿದೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸಹಾಯಕ್ಕೆ ಬಂದ ಆಕೆಯ ಸ್ನೇಹಿತರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.