ADVERTISEMENT

ಸಮಯ ಪ್ರಜ್ಞೆ ಮೆರೆದು ರೋಗಿಯ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್ ಕಾಶಪ್ಪ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 8:13 IST
Last Updated 2 ಫೆಬ್ರುವರಿ 2022, 8:13 IST
ಕಾಶಪ್ಪ
ಕಾಶಪ್ಪ   

ಬೆಂಗಳೂರು: ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾಶಪ್ಪ ಕಲ್ಲೂರು ಅವರು ಸಮಯ ಪ್ರಜ್ಞೆ ಮೆರೆದು ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಅವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ವ್ಯಕ್ತಿಯೊಬ್ಬರನ್ನು ಆಂಬುಲೆನ್ಸ್ ಮೂಲಕ ಗ್ಲೋಬಲ್ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ವಿಧಾನಸೌಧದ ಸಿಐಡಿ ಕಚೇರಿ ಬಳಿ ರೋಗಿಯಿದ್ದ ಆಂಬುಲೆನ್ಸ್‌ನ ಟಯರ್ ಪಂಕ್ಚರ್ ಆಗಿತ್ತು. ರೋಗಿಯ ಪತ್ನಿ ಹಾಗೂ ಮಗಳು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ನೆರವಿಗೆ ಧಾವಿಸಿರಲಿಲ್ಲ. ಸುಮಾರು 10 ಕ್ಕೂ ಹೆಚ್ಚು ಆಂಬುಲೆನ್ಸ್‌ಗಳಿಗೆ ಕರೆಮಾಡಿದರೂ ಪ್ರಯೋಜನವಾಗಿರಲಿಲ್ಲ.

ರಸ್ತೆ ಬದಿಯಲ್ಲಿ ನಿಂತ ತಾಯಿ ಹಾಗೂ ಮಗಳು ಪರದಾಡುತ್ತಿರುವುದನ್ನು ಕಂಡ ಕಾಸಪ್ಪ ಕೂಡ ಆಂಬುಲೆನ್ಸ್‌ಗೆ ಕರೆಮಾಡಿದ್ದಾರೆ. ಸುಮಾರು ಹೊತ್ತು ಕಾದರೂ ಆಂಬುಲೆನ್ಸ್ ಬಂದಿಲ್ಲ. ಹೀಗಾಗಿ ಪಂಕ್ಚರ್ ಆಗಿದ್ದ ಚಕ್ರವನ್ನು ಅವರೇ ಬದಲಿಸಿ ಆಂಬುಲೆನ್ಸ್ ಹೊರಡಲು ನೆರವಾಗಿದ್ದಾರೆ.

ADVERTISEMENT

ಕಾಸಪ್ಪ ಅವರ ಕಾರ್ಯದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಜೀವ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.