ಬೆಂಗಳೂರು: ಟೀಮ್ ಕದಳಿ ಸಂಘಟನೆಯು ‘ಯಕ್ಷ ಸಿಂಧೂರ’ ಶೀರ್ಷಿಕೆಯಡಿ ಇದೇ 21ರಂದು ರಾತ್ರಿ 10 ಗಂಟೆಗೆ ಪೌರಾಣಿಕ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದೆ.
ಕೊಳಗಿ ಕೇಶವ ಹೆಗಡೆ ಅವರ ಭಾಗವತಿಕೆಯಲ್ಲಿ ‘ಶ್ರೀರಾಮ ಪಟ್ಟಾಭಿಷೇಕ’ ಯಕ್ಷಗಾನ ಪ್ರದರ್ಶನ ಕಾಣಲಿದ್ದು, ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ (ದಶರಥ), ಸುಧೀರ್ ಉಪ್ಪೂರು (ಕೈಕೆ), ಸಿದ್ದಾಪುರ ಅಶೋಕ ಭಟ್ (ಮಂಥರೆ), ಗಣಪತಿ ಹೆಗಡೆ ತೋಟಿಮನೆ (ರಾಮ), ಪ್ರಕಾಶ್ ಕಿರಾಡಿ (ಲಕ್ಷ್ಮಣ), ನಾಗರಾಜ್ ದೇವಲ್ಕುಂದ (ಸೀತೆ) ಹಾಗೂ ಪ್ರಶಾಂತ್ ಹೆಗಡೆ (ವಸಿಷ್ಠ) ಪಾತ್ರಧಾರಿಗಳಾಗಿ ಬಣ್ಣ ಹಚ್ಚಲಿದ್ದಾರೆ.
‘ಸುದರ್ಶನ ವಿಜಯ’ ಪ್ರಸಂಗದ ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೇಯಾ ಆಚಾರ್ಯ ಅಲಂಕಾರು ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಜಯಪ್ರಕಾಶ್ ಪೆರ್ಮುದೆ (ವಿಷ್ಣು), ಸಂತೋಷ್ ಹಿಲಿಯಾಣ (ಲಕ್ಷ್ಮೀ), ವಿದ್ಯಾಧರ ಜಲವಳ್ಳಿ (ಸುದರ್ಶನ), ವಿಶ್ವನಾಥ ಹೆನ್ನಾಬೈಲ್ (ಶತ್ರುಪ್ರಸೂದನ) ಹಾಗೂ ಪ್ರಜ್ವಲ್ ಕುಮಾರ್ (ದೇವೇಂದ್ರ) ಭಾಗವಹಿಸುತ್ತಾರೆ.
‘ರುಕ್ಕಿಣಿ ಕಲ್ಯಾಣ’ ಪ್ರಸಂಗಕ್ಕೆ ಸುರೇಶ ಶೆಟ್ಟಿ ಶಂಕರನಾರಾಯಣ ಅವರ ಭಾಗವತಿಕೆ ಇರಲಿದ್ದು, ಮುಮ್ಮೇಳದಲ್ಲಿ ಸುನಿಲ್ ಹೊಲಾಡು (ಭೀಷ್ಮಕ), ಸುಬ್ರಹ್ಮಣ್ಯ ಚಿಟ್ಟಾಣಿ (ರುಕ್ಮ), ಗೋಪಾಲ ಆಚಾರ್ (ಕೃಷ್ಣ), ನಾಗರಾಜ್ ದೇವಲ್ಕುಂದ (ರುಕ್ಮಿಣಿ), ಶೇಖರ ಶೆಟ್ಟಿ ಎಳಬೇರು (ಬ್ರಾಹ್ಮಣ ಹಾಗೂ ಕ್ಷೌರಿಕ) ಮತ್ತು ಪ್ರಶಾಂತ್ ಹೆಗಡೆ (ಶಿಶುಪಾಲ) ಪಾಲ್ಗೊಳ್ಳುತ್ತಾರೆ.
ಮುಂಗಡ ಟಿಕೆಟ್‌ಗಳಿಗೆ ಮೊ.9036963626 ಅಥವಾ 9972368637
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.