ADVERTISEMENT

ಬೈಕ್–ವಿದ್ಯುತ್‌ ಕಂಬಕ್ಕೆ ಬೆನ್ಜ್‌ ಕಾರು ಡಿಕ್ಕಿ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 18:59 IST
Last Updated 28 ಅಕ್ಟೋಬರ್ 2023, 18:59 IST
ಸಾವು (ಪ್ರಾತಿನಿಧಿಕ ಚಿತ್ರ)
ಸಾವು (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಜೆ.ಪಿ. ನಗರ 8ನೇ ಹಂತದಲ್ಲಿ ಬೈಕ್‌ ಹಾಗೂ ವಿದ್ಯುತ್ ಕಂಬಕ್ಕೆ ಬೆನ್ಜ್‌ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಬೈಕ್ ಸವಾರ ರಾಜೇಂದ್ರ (46) ಮೃತಪಟ್ಟಿದ್ದಾರೆ.

‘ಚಿಕ್ಕಲಸಂದ್ರ ನಿವಾಸಿ ರಾಜೇಂದ್ರ, ಗೊಟ್ಟಿಗೆರೆಯಲ್ಲಿ ಫ್ಯಾಬ್ರಿಕೇಷನ್ ಮಳಿಗೆ ಇಟ್ಟುಕೊಂಡಿದ್ದರು. ಕೋಣನಕುಂಟೆ ಕ್ರಾಸ್‌ನಿಂದ ಗೊಟ್ಟಿಗೆರೆಯತ್ತ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

‘ಬೆನ್ಜ್ ಕಾರಿನ ಚಾಲಕ, ಅತೀ ವೇಗವಾಗಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದ. ರಸ್ತೆಯಲ್ಲಿ ತೆರಳುತ್ತಿದ್ದ ರಾಜೇಂದ್ರ ಬೈಕ್‌ಗೆ ಗುದ್ದಿತ್ತು. ಬೈಕ್‌ನಿಂದ ಹಾರಿದ್ದ ರಾಜೇಂದ್ರ ಕಾರಿನ ಮೇಲೆ ಬಿದ್ದಿದ್ದರು. ಹಾಗೆಯೇ ಚಲಿಸಿದ್ದ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿತ್ತು.’

ADVERTISEMENT

‘ತೀವ್ರ ಗಾಯಗೊಂಡಿದ್ದ ರಾಜೇಂದ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ. ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.