ವಿದ್ಯುತ್ ಪರಿವರ್ತಕದ ತಳಪಾಯ ಕುಸಿದ ಸ್ಥಳದಲ್ಲಿ ದುರಸ್ತಿ ಕೈಗೊಂಡಿರುವುದು
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಲ್ಲಾಳು ವಾರ್ಡ್‌ನ ನಾಗದೇವನಹಳ್ಳಿಯ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಪರಿವರ್ತಕ ಇರುವ ಜಾಗದ ತಳಪಾಯ ಕುಸಿದಿತ್ತು. ಬೆಸ್ಕಾಂ ಸಿಬ್ಬಂದಿ ಕುಸಿದ ಜಾಗವನ್ನು ಸೋಮವಾರ ದುರಸ್ತಿಗೊಳಿಸಿದ್ದಾರೆ.
‘ಪ್ರಜಾವಾಣಿ’ಯ ಮೇ 26ರ ಸಂಚಿಕೆಯ ಕುಂದು ಕೊರತೆ ವಿಭಾಗದಲ್ಲಿ ‘ವಿದ್ಯುತ್ ಪರಿವರ್ತಕ ಇರುವ ಜಾಗದ ಕುಸಿತ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಾರ್ವಜನಿಕರ ಅಹವಾಲು ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಪರಿವರ್ತಕ ಇರುವ ಜಾಗದ ತಳಪಾಯ ಕುಸಿದ ಸ್ಥಳದಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.