ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನವು ಮಹಾಮಾನವ ಅಗೋಳಿ ಮಂಜಣ್ಣ ದತ್ತಿ, ಬೆಸುನಾ ಮಲ್ಯ ದತ್ತಿ, ಸತ್ಯಪುತ್ರ ಬಲಿಚಕ್ರವರ್ತಿ ದತ್ತಿ, ಗುಮ್ಮಡಿ ವಿಠಲರಾವ್ ಗದ್ದಾರ್ ದತ್ತಿ ಮತ್ತು ರಾಜಾ ಸರ್ ಮುತ್ತಯ್ಯ ಚೆಟ್ಟಿಯಾರ್ ದತ್ತಿಗಳ ಆಶ್ರಯದಲ್ಲಿ ‘ಭಕ್ತಿಗೀತೆ ಗಾಯನ ಮತ್ತು ವೈಚಾರಿಕ ಗೀತೆ ಗಾಯನ ಸ್ಪರ್ಧೆ’ಯನ್ನು ಏರ್ಪಡಿಸಿದೆ.
10 ರಿಂದ16 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕೆ. ಮೋಹನ್ ದೇವ್ ಆಳ್ವ ಮತ್ತು ಎಂ.ಕೆ. ಶೈಲಜಾ ಆಳ್ವ ಅವರು ಈ ದತ್ತಿಗಳನ್ನು ಸ್ಥಾಪಿಸಿದ್ದಾರೆ.
ಸ್ಪರ್ಧೆಯು ಆಗಸ್ಟ್ 31ರಂದು ನಡೆಯ ಲಿದೆ. ವಿಜೇತರಿಗೆ ಪ್ರಥಮ ಬಹುಮಾನ ₹4ಸಾವಿರ, ದ್ವಿತೀಯ ಬಹುಮಾನ₹3 ಸಾವಿರ ಮತ್ತು ತೃತೀಯ ಬಹು ಮಾನವಾಗಿ ₹2 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ಆಸಕ್ತರು ಆಗಸ್ಟ್ 25ರ ಸಂಜೆ 5 ಗಂಟೆ ಯೊಳಗೆ ಎನ್.ಆರ್. ಕಾಲೊನಿಯಬಿ.ಎಂ.ಶ್ರೀ. ಪ್ರತಿಷ್ಠಾನದ ಕಚೇರಿ ಯಲ್ಲಿ ಹೆಸರು ನೋಂದಾಯಿಸಿ. ಅರ್ಜಿಗಳು ಕಚೇರಿ ಯಲ್ಲಿ ದೊರೆಯುತ್ತವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ತಿಳಿಸಿ ದ್ದಾರೆ. ಮಾಹಿತಿಗೆ : 99728 12127 ಸಂಪರ್ಕಿಸಿ.
ಬಿಎಂಟಿಸಿ ಹೊಸಮಾರ್ಗ
ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಹಾಗೂ ಅತ್ತಿಬೆಲೆ ನಡುವೆ ಹೊಸ ಮಾರ್ಗದಲ್ಲಿ ಹವಾನಿಯಂತ್ರಿತ ಬಸ್ ಸಂಚಾರ ಇದೇ 24ರಿಂದ ಆರಂಭವಾಗಲಿದೆ. ಮಾರ್ಗ ಸಂಖ್ಯೆ ವಿ–500ವಿಎ ಆಗಿದ್ದು, ಟಿನ್ ಫ್ಯಾಕ್ಟರಿ, ಮಾರತ್ ಹಳ್ಳಿ ಬ್ರಿಡ್ಜ್, ಸರ್ಜಾಪುರ ಸಿಗ್ನಲ್, ದೊಮ್ಮಸಂದ್ರ, ಸರ್ಜಾ ಪುರ, ಬಿದರಗುಪ್ಪೆ ಮಾರ್ಗ ವಾಗಿ ಸಂಚರಿ ಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.