ADVERTISEMENT

ಎಂಟು ಜಿಲ್ಲೆಗಳಲ್ಲಿ ‘ಭಾರತ್ ಜೋಡೊ’ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:47 IST
Last Updated 22 ಆಗಸ್ಟ್ 2022, 19:47 IST
   

ಬೆಂಗಳೂರು: ‘ಸೆ.7ರಂದು ರಾಜೀವ್ ಗಾಂಧಿ ಅವರ ಸಮಾಧಿಗೆ ನಮಿಸಿ, ಕನ್ಯಾಕುಮಾರಿಯಿಂದ ಪಕ್ಷದ ‘ಭಾರತ್
ಜೋಡೊ’ ಪಾದಯಾತ್ರೆ ಆರಂಭವಾಗಲಿದೆ. ರಾಜ್ಯದಲ್ಲಿನ ಪಾದಯಾತ್ರೆ ಉಸ್ತುವಾರಿಯನ್ನು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಿತ್ಯ ಎಷ್ಟು ದಿನ ನಡೆಯಬೇಕು, ಎಲ್ಲೆಲ್ಲಿಗೆ ಭೇಟಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿ 8 ಜಿಲ್ಲೆಗಳಲ್ಲಿ 21 ದಿನ ಪಾದಯಾತ್ರೆ ನಡೆಯಲಿದೆ. ಕೆಲವೆಡೆ ಅರಣ್ಯ ಪ್ರದೇಶ
ವಿದ್ದು, ಅಲ್ಲಿ ಪಾದಯಾತ್ರೆ ಬೇಕೇ ಎಂಬ ವಿಚಾರವಾಗಿ ಸ್ಥಳೀಯ ಪೊಲೀಸರ ಜತೆ ಚರ್ಚಿಸಿದ ಬಳಿಕ ದೆಹಲಿಯ ತಂಡ ತೀರ್ಮಾನಿಸಲಿದೆ’ ಎಂದರು.

ಕಾಂಗ್ರೆಸ್ ಕಚೇರಿಗೆ ಸಾವರ್ಕರ್‌ ಭಾವಚಿತ್ರ ಹಾಕಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪ್ರಚೋದನಕಾರಿ ಹೇಳಿಕೆ ನೀಡಿ, ಕಾಂಗ್ರೆಸಿಗರನ್ನು ಎತ್ತಿ ಕಟ್ಟಿ, ಕಪ್ಪುಬಾವುಟ ಹಿಡಿಯಿರಿ ಎನ್ನುವ ಅಗತ್ಯ
ವಿಲ್ಲ. ಶಾಂತಿ ಕಾಪಾಡಬೇಕಿರುವುದು
ಮುಖ್ಯಮಂತ್ರಿಯ ಜವಾಬ್ದಾರಿ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.