ADVERTISEMENT

ಬಿಲ್‌ ಪಾವತಿ ವಿಳಂಬ: 11 ಇಂದಿರಾ ಕ್ಯಾಂಟೀನ್ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:53 IST
Last Updated 18 ಜುಲೈ 2024, 15:53 IST
<div class="paragraphs"><p>ಇಂದಿರಾ ಕ್ಯಾಂಟೀನ್ (ಸಾಂದರ್ಭಿಕ ಚಿತ್ರ)</p></div>

ಇಂದಿರಾ ಕ್ಯಾಂಟೀನ್ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಎರಡು ವಾರಗಳಿಂದ ಬಿಲ್‌ ಪಾವತಿ ಮಾಡದ್ದರಿಂದ ನಗರದಲ್ಲಿರುವ 11 ಇಂದಿರಾ ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ.

ಬಿಬಿಎಂಪಿಯ ದಕ್ಷಿಣ ವಲಯದ ಬಸವನಗುಡಿ, ಬೈರಸಂದ್ರ, ವಿವಿ ಪುರ, ಜಯನಗರ, ಆಡುಗೋಡಿ, ಈಜಿಪುರ ಮತ್ತು ಸಿದ್ದಾಪುರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳು ಬಂದ್‌ ಆಗಿವೆ.

ADVERTISEMENT

ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಪಾಹಾರ, ಊಟ ಮತ್ತು ರಾತ್ರಿ ಊಟವನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದ ಏಜೆನ್ಸಿಗಳಿಗೆ ₹40 ಕೋಟಿ ಬಿಲ್‌ ಅನ್ನು ಬಿಬಿಎಂಪಿ ಪಾವತಿಸದ ಕಾರಣ ಕಾರ್ಯಾಚರಣೆ ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

‘ನಗರದ ಇತರೆ ಭಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಡೆಸುತ್ತಿರುವ ಎಲ್ಲ ಏಜೆನ್ಸಿಗಳ ಬಿಲ್‌ಗಳನ್ನು ನಾವು ಪಾವತಿಸಿದ್ದೇವೆ. ದಕ್ಷಿಣ ವಲಯದ ಏಜೆನ್ಸಿ ನಾಗರಿಕರಿಗೆ ಒದಗಿಸಿದ ಆಹಾರಕ್ಕಿಂತ ಹೆಚ್ಚಿನ ಮೊತ್ತದ ಬಿಲ್‌ ಸಲ್ಲಿಸಿರುವುದರಿಂದ ಹಣ ಪಾವತಿ ಮಾಡಿಲ್ಲ. ಈ ಪ್ರದೇಶಗಳಲ್ಲಿ ನಾವು ಪರ್ಯಾಯ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಶ್‌ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.