ADVERTISEMENT

ಸುಧಾಕರ್ ಹೇಳಿಕೆ ಶೋಭೆ ತರದು: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 5:19 IST
Last Updated 30 ಜನವರಿ 2025, 5:19 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: 'ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ. ನನ್ನ ಮೇಲೆ ಯುದ್ಧ ಸಾರುವುದಾಗಿ ಸಂಸದ ಕೆ. ಸುಧಾಕರ್ ನೀಡಿದ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸುದ್ಧಿಗಾರರ ಜತೆ ಗುರುವಾರ ಮಾತನಾಡಿದ ಅವರು, ಕೇಂದ್ರ ನೇಮಿಸಿದ ವೀಕ್ಷಕರ ಸಮ್ಮುಖದಲ್ಲಿ, ಚುನಾವಣಾಧಿಕಾರಿಗಳ ಮೂಲಕ ಎಲ್ಲ ಪ್ರಕ್ರಿಯೆ ನಡೆದಿವೆ. ಅವರಲ್ಲಿ ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆಯ್ಕೆಗಳು ಪಾರದರ್ಶಕವಾಗಿ ನಡೆದಿವೆ. ಮಾಹಿತಿ ಪಡೆಯದೇ ಹೇಳಿಕೆ ನೀಡುವುದು ಅವರಿಗೂ, ನನಗೂ ಶೋಭೆ ತರುವುದಿಲ್ಲ ಎಂದರು.

ADVERTISEMENT

ನಾನು ಮುಖ್ಯಮಂತ್ರಿ ಆಗಲು ಪಕ್ಷ ಸಂಘಟನೆ ಮಾಡುತ್ತಿಲ್ಲ. ಇದು ನನ್ನ ಮನೆಯ ಕೆಲಸವಲ್ಲ. ಪಕ್ಷದ ಅಧ್ಯಕ್ಷ ಸ್ಥಾನ ಮಂತ್ರಿ ಹುದ್ದೆಯಲ್ಲ. ನಾನು ಪಕ್ಷ ಬಲಪಡಿಸಲು ಹಗಲು ರಾತ್ರಿ ಶಮಿಸುತ್ತಿದ್ದೇನೆ. ಅಷ್ಟಕ್ಕೂ ಚಿಕ್ಕಬಳ್ಳಾಪುರದಲ್ಲಿ ಆಯ್ಕೆ ಆಗಿರುವುದು ಸುಧಾಕರ್ ಸಂಬಂಧಿಯೇ. ಬೇರೆ ಆಕಾಂಕ್ಷಿಗಳು ಒಳ್ಳೆಯ ಕೆಲಸ ಮಾಡಿದರೆ ಮುಂದೆ ಅವಕಾಶ ಸಿಗುತ್ತದೆ. ತಾಳ್ಮೆ ಇರಬೇಕು ಎಂದರು.

ಸುಧಾಕರ್ ಜತೆ ಮಾತನಾಡುವೆ. ಶ್ರೀರಾಮುಲು ಜತೆಗೂ ಮಾತನಾಡಿರುವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.