ADVERTISEMENT

ಮೆಟ್ರೊ: ಪೆಪ್ಪರ್‌ ಸ್ಪ್ರೇ ಒಯ್ಯಲು ಅಡ್ಡಿ ಇಲ್ಲ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 19:43 IST
Last Updated 3 ಡಿಸೆಂಬರ್ 2019, 19:43 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ಮಹಿಳಾ ಪ್ರಯಾಣಿಕರು ಸ್ವಯಂ ರಕ್ಷಣೆಗಾಗಿ ಪೆಪ್ಪರ್‌ ಸ್ಪ್ರೇಯನ್ನು ಮೆಟ್ರೊ ರೈಲಿನೊಳಗೆ ಒಯ್ಯಲು ಅಡ್ಡಿಪಡಿಸಬಾರದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದೆ.

‘ಪೆಪ್ಪರ್‌ ಸ್ಪ್ರೇ ಒಯ್ಯಲು ಅನುಮತಿ ನೀಡಬೇಕು ಎಂದು ಎಲ್ಲ ನಿಲ್ದಾಣಗಳ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದ್ದಾರೆ.

ಮಹಿಳೆಯರು ಪೆಪ್ಪರ್‌ ಸ್ಪೇ ಹಿಡಿದು ನಿಲ್ದಾಣ ಪ್ರವೇಶಿಸುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ತಡೆದಿರುವ ಪ್ರಸಂಗಗಳಿದ್ದವು. ಹೀಗಾಗಿ, ಅಧಿಕೃತವಾಗಿ ಸೂಚನೆ ನೀಡಲಾಗಿದೆ.

ADVERTISEMENT

‘ಕೆಲ ನಿಲ್ದಾಣಗಳಲ್ಲಿ ಪೆಪ್ಪರ್‌ ಸ್ಪ್ರೇ ಒಯ್ಯಲು ಭದ್ರತಾ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಸ್ವಯಂರಕ್ಷಣೆಗಾಗಿ ಮಹಿಳೆ ಇಂತಹ ಸಾಧನಗಳನ್ನು ಒಯ್ಯುವುದನ್ನು ತಡೆಯುತ್ತಿರುವುದೇಕೇ’ ಎಂದು ಪ್ರಶ್ನಿಸಿ ರಕ್ಷಿತ್‌ ಎಸ್‌.ಪೊನ್ನತ್‌ಪುರ್ ಎಂಬುವರು ಟ್ವೀಟ್‌ ಮಾಡಿದ್ದರು.

‘ಪೆಪ್ಪರ್‌ ಸ್ಪ್ರೇ ಒಯ್ಯುವುದನ್ನು ತಡೆಯುತ್ತಿದ್ದುದು ಭದ್ರತಾ ಸಿಬ್ಬಂದಿಯ ಸ್ವಯಂ ನಿರ್ಧಾರವೇ ಅಥವಾ ನಿಗಮದ ನಿಯಮವೇ ಹಾಗಿದೆಯೇ’ ಎಂದೂ ಅವರು ಪ್ರಶ್ನಿಸಿದ್ದರು.

‘ಮೆಟ್ರೊ ರೈಲಿನಲ್ಲಿ‍ಪೆಪ್ಪರ್‌ ಸ್ಪ್ರೇ ಒಯ್ಯದಂತೆ ತಡೆಯುವುದಕ್ಕೆ ಯಾವುದೇ ಕಾರಣ ಇಲ್ಲ. ಯಾವುದೇ ಮಹಿಳೆ ಅಥವಾ ಪುರುಷ ತನ್ನ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವುದು ಸಹಜ’ ಎಂದು ಪ್ರಯಾಣಿಕ ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.