ಬೆಂಗಳೂರು: ಒಂದನೇ ಮತ್ತು ಎರಡನೇ ಹಂತದ ಮೆಟ್ರೊ ರೈಲು ಯೋಜನೆ ಅನುಷ್ಠಾನ ಮಾಡವಾಗ ಒಪ್ಪಂದ ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂದು ಪ್ರಶ್ನಿಸಿರುವ ಹೈಕೋರ್ಟ್, ಇದನ್ನು ಸ್ವತಂತ್ರ ಸಂಸ್ಥೆ ಮೂಲಕ ಖಚಿತಪಡಿಸಲು ಸಿದ್ಧವಿರುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯ, ಕೇಂದ್ರ ಸರ್ಕಾರ ಮತ್ತು ಮೆಟ್ರೊ ರೈಲು ನಿಗಮಕ್ಕೆ(ಬಿಎಂಆರ್‌ಸಿಎಲ್) ನಿರ್ದೇಶನ ನೀಡಿದೆ.
ದೊಮ್ಮಲೂರು ನಿವಾಸಿ ಡಿ.ಟಿ. ದೇವರೆ ಹಾಗೂ ‘ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ) ಅಥವಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೀತಿಯ ಸಂಸ್ಥೆಗಳಿಗೆ ವಹಿಸಿ ವರದಿ ಪಡೆಯಲು ಸಿದ್ಧವಿದ್ದೀರಾ’ ಎಂದು ಪೀಠ ಕೇಳಿತು. ಮುಂದಿನ ವಿಚಾರಣೆ ವೇಳೆ ನಿರ್ಧಾರ ತಿಳಿಸಬೇಕು ಎಂದು ಸೂಚಿಸಿತು. ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.