ADVERTISEMENT

‘ಮೈ ಬಿಎಂಟಿಸಿ’ ಆ್ಯಪ್‌ನಲ್ಲಿ ಕನ್ನಡ ಮಾಯ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 5:56 IST
Last Updated 18 ಫೆಬ್ರುವರಿ 2020, 5:56 IST
   

ಬೆಂಗಳೂರು: ಬಿಎಂಟಿಸಿ ಅಭಿವೃದ್ಧಿಪಡಿಸಿರುವ ‘ಮೈ ಬಿಎಂಟಿಸಿ’ ಆ್ಯಪ್‌ನಲ್ಲಿ ಕನ್ನಡ ಆಯ್ಕೆ ಅವಕಾಶ ಇಲ್ಲದಿರುವ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆ ಇದ್ದ ಆ್ಯಪ್‌ನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಆಯ್ಕೆ ಅವಕಾಶ ಇತ್ತು. ಹೊಸದಾಗಿ ಬಿಡುಗಡೆ ಮಾಡಿರುವ ಆ್ಯಪ್‌ನಲ್ಲಿ ಇಂಗ್ಲಿಷ್ ಮಾತ್ರ ಇದೆ. ಇದು ಪ್ರಯಾಣಿಕರ ಸಿಟ್ಟಿಗೆ ಕಾರಣವಾಗಿದೆ.

ಕನ್ನಡ ಗ್ರಾಹಕರ ಕೂಟ ಮಾಡಿರುವ ಟ್ವೀಟ್‌ಗೆ ಹಲವರು ‍ಪ್ರತಿಕ್ರಿಯಿಸಿದ್ದಾರೆ. ‘ಬಿಎಂಟಿಸಿ ಉತ್ತರ ಭಾರತದ ಸಂಸ್ಥೆ ಅಲ್ಲ. ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯ ಆ್ಯಪ್‌ನಲ್ಲಿ ಕನ್ನಡ ಇಲ್ಲದಿದ್ದರೆ ಹೇಗೆ? ಕನ್ನಡ ಬೇಕು ಎಂದು ಒತ್ತಾಯಿಸುವ ಸ್ಥಿತಿ ಬಂದಿರುವುದು ವಿಪರ್ಯಾಸ’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬಿಎಂಟಿಸಿ ಇರುವುದು ಲಂಡನ್‌ನಲ್ಲೋ, ಬೆಂಗಳೂರಿನಲ್ಲೋ’ ಎಂಬ ಪ್ರಶ್ನೆಯನ್ನೂ ಟ್ವಿಟಿಗರು ಕೇಳಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ಅಧಿಕಾರಿಯೊಬ್ಬರು, ‘ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಿರುವ ಹೊಸ ಆ್ಯಪ್‌ನಲ್ಲಿ ಇಂಗ್ಲಿಷ್ ಮಾತ್ರ ಇದೆ. ಕನ್ನಡಕ್ಕೆ ಅನುವಾದ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರವೇ ಎರಡೂ ಭಾಷೆಯಲ್ಲೂ ಆ್ಯಪ್‌ ಬಳಕೆ ಮಾಡಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.