ADVERTISEMENT

ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಲೌಡ್‌ಸ್ಪೀಕರ್‌ ಹಾಡುಗಳ ನಿಷೇಧ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 9:13 IST
Last Updated 20 ಸೆಪ್ಟೆಂಬರ್ 2019, 9:13 IST
   

ಬೆಂಗಳೂರು : ಬೆಂಗಳೂರಮಹಾನಗರ ಸಾರಿಗೆ ಸಂಸ್ಥೆಗೆ(ಬಿಎಂಟಿಸಿ) ಸೇರಿದ ಎಲ್ಲಾ ಬಸ್ಸುಗಳಲ್ಲಿ ಮೊಬೈಲ್‌ ಲೌಡ್‌ಸ್ಪೀಕರ್‌ನಲ್ಲಿ ಹಾಡುಹಾಕುವುದನ್ನುಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದುಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತುಸುತ್ತೋಲೆ ಹೊರಡಿಸಿರುವ ಬಿಎಂಟಿಸಿ,ಬಸ್‌ ಮತ್ತು ರೈಲುಗಳಲ್ಲಿ ಲೌಡ್‌ಸ್ಪೀಕರ್‌ ಬಳಕೆಯನ್ನು ನಿಷೇಧಿಸಬೇಕುಎಂದು ತುಮಕೂರಿನ ವಕೀಲರೊಬ್ಬರು ಹೈಕೋರ್ಟಿನಲ್ಲಿಪಿಐಎಲ್‌ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಬಿಎಂಟಿಸಿ ಈಕ್ರಮ ಕೈಗೊಂಡಿದೆ.

ಈ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆಮೂಡಿಸಲು ಬಸ್‌ಗಳಲ್ಲಿ ಭಿತ್ತಿ ಪತ್ರಗಳನ್ನು ಅಳವಡಿಸಲಾಗುವುದು ಎಂದು ಬಿಎಂಟಿಸಿ ಮೂಲಗಳುತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.