ADVERTISEMENT

ಬಿಎಂಟಿಸಿ ಬಸ್‌ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 16:31 IST
Last Updated 9 ಜನವರಿ 2026, 16:31 IST
ಅಪಘಾತ
ಅಪಘಾತ   

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸನಪುರ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಮಿಳುನಾಡಿನ ಕಣಿರಾಜ್ (28) ಮೃತಪಟ್ಟವರು.

ಕಣಿರಾಜ್ ಅವರು ಬೆಟ್ಟದಾಸನಪುರದಲ್ಲಿ ಜ್ಯೂಸ್ ಅಂಗಡಿ ಆರಂಭಿಸಲು ನಿರ್ಧರಿಸಿದ್ದರು. ಅಂಗಡಿ ನೋಡಲು ಸ್ನೇಹಿತರೊಂದಿಗೆ ಅವರು ಬೈಕ್‍ನಲ್ಲಿ ಹೊಸೂರಿನಿಂದ ನಗರಕ್ಕೆ ಬಂದಿದ್ದರು. ಆಗ ದುರ್ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ADVERTISEMENT

ಕಣಿರಾಜ್‍ ಅವರ ಸ್ನೇಹಿತ ಸಹ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವೇ ಅಪಘಾತಕ್ಕೆ ಕಾರಣ. ಚಾಲಕನನ್ನು ಬಂಧಿಸಿ, ಬಸ್ ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಎಲೆಕ್ಟ್ರಾನಿಕ್‍ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.