ADVERTISEMENT

ಮಹಿಳಾ ಪ್ರಯಾಣಿಕರಿಗೆ ಅಸಭ್ಯ ಪದ ಬಳಸಿದ್ದ ಬಿಎಂಟಿಸಿ ಬಸ್‌ ನಿರ್ವಾಹಕ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 16:35 IST
Last Updated 21 ಫೆಬ್ರುವರಿ 2026, 16:35 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಂಗಳೂರು: ಮಹಿಳಾ ಪ್ರಯಾಣಿಕರೊಂದಿಗೆ ಜಗಳಕ್ಕಿಳಿದು ಅಸಭ್ಯ ಪದಗಳನ್ನು ಬಳಸಿದ್ದ ಬಿಎಂಟಿಸಿ ಬಸ್‌ ಚಾಲಕ ಕಂ ನಿರ್ವಾಹಕ ಕಾಂತರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿ ಘಟಕ –37ರ ಬಸ್‌ ಅನ್ನು ಫೆ. 14ರಂದು ಕೊಳ್ಳೇಗಾಲ–ಬೆಂಗಳೂರು ಮಾರ್ಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಪ್ರಯಾಣಿಕರಾದ ಗೌರಮ್ಮ ಅವರಿಗೆ ಏಕವಚನದಲ್ಲಿ ಅವಮಾನಕರವಾಗಿ ಬೈದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿತ್ತು. 

ADVERTISEMENT

ಪ್ರಕರಣವನ್ನು ಪರಿಗಣಿಸಿ, ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ. ವಿಚಾರಣೆಯ ಇತ್ಯರ್ಥ ಆಗುವವರಗೆ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.