ಬೆಂಗಳೂರು: ನಗರದ ದೇವಸ್ಥಾನಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಬಿಎಂಟಿಸಿ ಆರಂಭಿಸಿರುವ ‘ಬೆಂಗಳೂರು ದಿವ್ಯ ದರ್ಶನ’ ಸಾರಿಗೆ ವ್ಯವಸ್ಥೆಯನ್ನು ವಾರದ ಎಲ್ಲ ದಿನಗಳಿಗೂ ವಿಸ್ತರಿಸಲು ಬಿಎಂಟಿಸಿ ನಿರ್ಧರಿಸಿದೆ.
ಇತ್ತೀಚೆಗೆ ಆರಂಭವಾಗಿರುವ ‘ಬೆಂಗಳೂರು ದಿವ್ಯ ದರ್ಶನ’ ವಾರಾಂತ್ಯಗಳಲ್ಲಿ ಮತ್ತು ರಜಾ ದಿನಗಳಲ್ಲಿ ಮಾತ್ರ ಇದೆ. ಜೂನ್ 2ರಿಂದ ಪ್ರತಿದಿನ ಸಂಚರಿಸಲಿದೆ.
ಬೆಳಿಗ್ಗೆ 8.30ಕ್ಕೆ ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಿಂದ ಹೊರಡಲಿದೆ. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಶ್ರೀದೇವಿ ಕರುಮಾರಿ ಅಮ್ಮನವರ ದೇವಸ್ಥಾನ, ಓಂಕಾರ ಹಿಲ್ಸ್, ವಸಂತಪುರ ಇಸ್ಕಾನ್ ದೇವಸ್ಥಾನ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಸ್ಥಾನಗಳಿಗೆ ಭೇಟಿ ನೀಡಿ ಸಂಜೆ 6.05ಕ್ಕೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಾಪಸ್ ಆಗಲಿದೆ.
ವಯಸ್ಕರಿಗೆ ₹ 450 ಮತ್ತು ಮಕ್ಕಳಿಗೆ ₹ 350 ಟಿಕೆಟ್ ದರ ಇರಲಿದೆ. ಮಾಹಿತಿಗಾಗಿ www.mybmtc.com ಮತ್ತು www.ksrtc.in ಸಂಪರ್ಕಿಸಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.