ADVERTISEMENT

ಗೃಹರಕ್ಷಕ ದಳಕ್ಕೆ ಪ್ರಯಾಣ ಉಚಿತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 20:08 IST
Last Updated 9 ಫೆಬ್ರುವರಿ 2020, 20:08 IST

ಬೆಂಗಳೂರು: ಕರ್ತವ್ಯನಿರತ ಗೃಹರಕ್ಷಕ ದಳ (ಹೋಂ ಗಾರ್ಡ್‌) ಸಿಬ್ಬಂದಿಯು ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ತವ್ಯನಿರತರ ಪ್ರಯಾಣಕ್ಕೆ ಚಾಲನಾ ಸಿಬ್ಬಂದಿ ಅವಕಾಶ ನೀಡದೆ ಅವಮಾನಿಸುತ್ತಿರುವುದಾಗಿ ಸಂಸ್ಥೆಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಆದೇಶ ಹೊರಡಿಸಿದೆ.

ಗೃಹರಕ್ಷಕ ದಳದ ಗುರುತಿನ ಚೀಟಿ, ಸಮವಸ್ತ್ರ ಧರಿಸಿ ಸಂಸ್ಥೆಯ ಸಾಮಾನ್ಯ ಸೇವೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.