ADVERTISEMENT

ಬೆಂಗಳೂರು ‌| ಗ್ರಂಥ ಬಹುಮಾನಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 23:30 IST
Last Updated 22 ಜುಲೈ 2025, 23:30 IST
   

ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಗ್ರಂಥ ಬಹುಮಾನಕ್ಕೆ ಅರ್ಜಿ ಆಹ್ವಾನಿಸಿದೆ. 

ಕೇಂದ್ರವು ಕನಕ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯ ಕುರಿತ ಸಂಶೋಧನೆ ಅಥವಾ ವಿಮರ್ಶಾ ಗ್ರಂಥವೊಂದಕ್ಕೆ ಬಹುಮಾನ ನೀಡುವ ಯೋಜನೆ ರೂಪಿಸಿದೆ. 2024ರಲ್ಲಿ ಪ್ರಥಮ ಮುದ್ರಣದಲ್ಲಿ ಪ್ರಕಟವಾದ ಗ್ರಂಥವನ್ನು ಬಹುಮಾನಕ್ಕೆ ಪರಿಗಣಿಸಲಾಗುತ್ತದೆ. ಈ ಬಹುಮಾನವು ₹ 25 ಸಾವಿರ ನಗದು ಒಳಗೊಂಡಿದೆ.

ಗ್ರಂಥ ಲೇಖಕರು ಅಥವಾ ಪ್ರಕಾಶಕರು ಸೆಪ್ಟೆಂಬರ್ 10ರೊಳಗೆ ಅರ್ಜಿಯನ್ನು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು–560056 ಈ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಪ್ರತಿಗಳು https://kanakadasaresearchcenter.karnataka.gov.in/ ನಲ್ಲಿ ಲಭ್ಯ ಎಂದು ಕೇಂದ್ರದ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ‌

ADVERTISEMENT

ವಿವರಕ್ಕೆ: 6364529319 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.