ADVERTISEMENT

ಸಂಸ್ಕೃತಿಯ ಭಾಗಕ್ಕೆ ಸಂಕಷ್ಟ ತಂದ ಜನಪ್ರಿಯತೆ: ಬರಗೂರು ರಾಮಚಂದ್ರಪ್ಪ

ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ * ಐದು ಪುಸ್ತಕಗಳು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 5:02 IST
Last Updated 4 ನವೆಂಬರ್ 2019, 5:02 IST
ಬರಗೂರು ರಾಮಚಂದ್ರಪ್ಪ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಲೇಖಕ ಚ.ಹ. ರಘುನಾಥ, ಕೆ.ಪುಟ್ಟಸ್ವಾಮಿ, ಲೇಖಕರಾದ ಸಂತೋಷಕುಮಾರ್ ಮೆಹೆಂದಳೆ, ವಿಕಾಸ ನೇಗಿಲೋಣಿ ಹಾಗೂ ಜೋಗಿ ಇದ್ದರು –ಪ್ರಜಾವಾಣಿ ಚಿತ್ರ
ಬರಗೂರು ರಾಮಚಂದ್ರಪ್ಪ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಲೇಖಕ ಚ.ಹ. ರಘುನಾಥ, ಕೆ.ಪುಟ್ಟಸ್ವಾಮಿ, ಲೇಖಕರಾದ ಸಂತೋಷಕುಮಾರ್ ಮೆಹೆಂದಳೆ, ವಿಕಾಸ ನೇಗಿಲೋಣಿ ಹಾಗೂ ಜೋಗಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನಪ್ರಿಯ ಪದ ಮತ್ತು ಪರಿಕಲ್ಪನೆಯನ್ನು ನಕಾರಾತ್ಮಕ ನೆಲೆಯಲ್ಲಿ ಬಳಸುವ ಪರಿಪಾಠ ನಮ್ಮಲ್ಲಿದೆ. ಇದರಿಂದಾಗಿಯೇ ಸಂಸ್ಕೃತಿಯ ಭಾಗವಾದ ಸಾಹಿತ್ಯ, ಕಲೆ ಹಾಗೂ ಸಿನಿಮಾಕ್ಕೆ ಅನ್ಯಾಯವಾಗುತ್ತಾ ಬಂದಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.‘ಕಲಾ ಪ್ರಕಾರವನ್ನುಅನುಮಾನ, ತಿರಸ್ಕಾರ ಹಾಗೂ ಅನಾದಾರದಿಂದ ನೋಡುವ ವಲಯವಿದೆ. ಅಂತವರು ಜನಪ್ರಿಯ ಕೃತಿಗಳನ್ನು ತಿರಸ್ಕರಿಸುವ ಮುನ್ನ ಒಮ್ಮೆಯಾದರೂ ಓದುವುದನ್ನು ರೂಢಿಸಿಕೊಳ್ಳಬೇಕು.ಜನಪ್ರಿಯ ಎನ್ನುವ ಹೆಸರಿನಲ್ಲಿ ಕಟ್ಟಿಮನಿ, ನಿರಂಜನ, ಅನಕೃ, ತ್ರಿವೇಣಿ ಸೇರಿದಂತೆ ಹಲವರಿಗೆ ಅನ್ಯಾಯವಾಗಿದೆ’ ಎಂದು ಹೇಳಿದರು.

ಲೇಖಕಿ ಕೆ. ಪುಟ್ಟಸ್ವಾಮಿ, ‘ಸಿನಿಮಾ ಉದ್ಯಮ ಹಾಗೂ ಕಲಾವಿದರ ಬಗ್ಗೆ ಲೇಖನಗಳು ಬರುತ್ತಿವೆ. ಆದರೆ, ಚಲನಚಿತ್ರ ವಿಮರ್ಶೆಗಳಿಗೆ ಸೂಕ್ತ ನ್ಯಾಯ ದೊರೆಯುತ್ತಿಲ್ಲ. ಸಾಹಿತಿಗಳು ಕೂಡಾ ಸಿನಿಮಾ ವಿಮರ್ಶೆಗಳಿಗೆ ಆದ್ಯತೆ ನೀಡಿಲ್ಲ. ಆದರೆ,ಮರಾಠಿ ಹಾಗೂ ಮಲಯಾಳಿ ಸಾಹಿತ್ಯದಲ್ಲಿ ಸಿನಿಮಾಕ್ಕೆ ವಿಶೇಷ ಪ್ರಾತಿನಿಧ್ಯತೆ ನೀಡಲಾಗಿದೆ. ಇದರಿಂದಾಗಿ ಸಿನಿಮಾ ವಿಮರ್ಶೆಗಳನ್ನು ಒಳಗೊಂಡ ಸಾಕಷ್ಟು ಪುಸ್ತಕಗಳು ಅಲ್ಲಿ ಬಂದಿವೆ. ಕನ್ನಡದಲ್ಲಿ ಕೂಡಾ ಸಿನಿಮಾ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ, ಸಾಹಿತ್ಯ ಕೃಷಿ ನಡೆಸಬೇಕು’ ಎಂದರು.

ADVERTISEMENT

ಪುಸ್ತಕಗಳ ವಿವರ

* ಬೆಳ್ಳಿತೊರೆ:ಲೇಖಕ– ರಘುನಾಥ ಚ.ಹ.,ಪುಟಗಳು– 192,ಬೆಲೆ– ₹ 195

* ಎಂಟೆಬೆ:ಲೇಖಕ– ಸಂತೋಷಕುಮಾರ್ ಮೆಹೆಂದಳೆ,ಪುಟಗಳು– 184,ಬೆಲೆ– ₹ 195

* ಬಸವರಾಜ ವಿಳಾಸ:ಲೇಖಕ– ವಿಕಾಸ ನೇಗಿಲೋಣಿ,ಪುಟಗಳು– 176,ಬೆಲೆ– ₹ 170

* ಅಬ್ರಾಹ್ಮಣ:ಲೇಖಕ– ಕೆ.ಟಿ. ಗಟ್ಟಿ,ಪುಟಗಳು– 272,ಬೆಲೆ– ₹ 250

* ಇತಿಹಾಸದ ಮೊಗಸಾಲೆಯಲ್ಲಿ:ಲೇಖಕ– ಕೆ.ಟಿ. ಗಟ್ಟಿ,ಪುಟಗಳು– 216,ಬೆಲೆ– ₹ 250

ಪ್ರಕಾಶನ– ಅಂಕಿತ ಪುಸ್ತಕ, ಗಾಂಧಿ ಬಜಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.