ಸಾದರ ಸ್ವೀಕಾರ
ರಾಜರಾಜೇಶ್ವರಿ ನಗರ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ಒಂದು ಅಪೂರ್ವ ಆತ್ಮಕಥೆ’, ‘ಭಾರತೀಯ ಹೋರಾಟ’ ಹಾಗೂ ‘ಅಸಾಮಾನ್ಯ ದಿನಚರಿ’ ಎಂಬ ಪುಸ್ತಕಗಳು ಆಗಸ್ಟ್ 30 ರಂದು ಜನಾರ್ಪಣೆಯಾಗಲಿವೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಜ್ ಕುಮಾರ್ ತಿಳಿಸಿದರು.
ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ರಾಜರಾಜೇಶ್ವರಿನಗರ, ಸನ್ ಸ್ಟಾರ್ ಪಬ್ಲಿಷರ್ಸ್ ವತಿಯಿಂದ ಪ್ರೊ.ಕೆ.ಈ. ರಾಧಾಕೃಷ್ಣ ಅನುವಾದಿಸಿರುವ ಮೂರು ಪುಸ್ತಕಗಳನ್ನು ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾರ್ಪಣೆ ಮಾಡುವರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಗೃಹ ಸಚಿವ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ, ಲೇಖಕ ಪ್ರೊ.ಸುಮಂತ್ರ ಬೋಸ್, ನಿವೃತ್ತ ಉಪ ದಂಡನಾಯಕ ರಮೇಶ್ ಹಲಗಲಿ, ಉದ್ಯಮಿ ರೊನಾಲ್ಡ್ ಕೊಲಾಸೋ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಜೆ.ಆರ್. ಶಿವಶಂಕರ್ ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.