ADVERTISEMENT

ಬಾಷ್ ಕಂಪನಿ ಲೆಟರ್‌ಹೆಡ್ ಕದ್ದು ವಂಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 16:16 IST
Last Updated 14 ಜೂನ್ 2020, 16:16 IST

ಬೆಂಗಳೂರು: ಬಾಷ್ ಕಂಪನಿ ಲೆಟರ್ ಹೆಡ್ ಕದ್ದು, ವ್ಯವಸ್ಥಾಪಕ ನಿರ್ದೇಶಕರ ನಕಲಿ ಸಹಿ ಮಾಡಿ ವಂಚಿಸಿದ ಆರೋಪದಡಿ ಶಿವ ಶಕ್ತಿವೇಲ ಪನ್ನಿಸೆಲ್ವಂ ಎಂಬುವರ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೃತ್ಯ ಸಂಬಂಧ ಬಾಷ್ ಕಂಪನಿ ಜನರಲ್ ಮ್ಯಾನೇಜರ್ ವಿ.ಕೆ.ಕದಮ್ ದೂರು ನಿಡಿದ್ದಾರೆ. ಅದರನ್ವಯ ಶಿವ ಶಕ್ತಿವೇಲ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಐರ್ಲೆಂಡ್‌ನಲ್ಲಿ ವ್ಯಾಪಾರ ವೀಸಾ ಪಡೆಯಲು ಶಿವ ಶಕ್ತಿವೇಲ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಬಾಷ್‌ ಕಂಪನಿ ಲೆಟರ್ ಹೆಡ್ ನೀಡಿದ್ದರು. ಪತ್ರದ ಬಗ್ಗೆ ಅನುಮಾನಗೊಂಡಿದ್ದ ಐರ್ಲೆಂಡ್ ವಲಸೆ ಅಧಿಕಾರಿಗಳು, ಬಾಷ್ ಕಂಪನಿಯನ್ನು ಇತ್ತೀಚೆಗೆ ಸಂಪರ್ಕಿಸಿದ್ದರು. ಆಗ ಆರೋಪಿ ಕೃತ್ಯ ಬಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಆರೋಪಿ ಬಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಹೇಗೋ ಕಂಪನಿಯ ಲೆಟರ್‌ ಹೆಡ್ ಕದ್ದಿದ್ದಾರೆ ಎಂಬುದಾಗಿ ಕ‌ದಮ್‌ ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.