ADVERTISEMENT

ಬ್ರಿಟಿಷ್ ಹೈ ಕಮಿಷನರ್ ಹೆಸರಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:09 IST
Last Updated 1 ಮಾರ್ಚ್ 2019, 20:09 IST
   

ಬೆಂಗಳೂರು: ಬ್ರಿಟಿಷ್ ಹೈ ಕಮಿಷನರ್ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ವ್ಯಕ್ತಿಯೊಬ್ಬ 4.8 ಮಿಲಿಯನ್ ( ₹48 ಲಕ್ಷ) ಕೊಡುವುದಾಗಿ ಆಮಿಷವೊಡ್ಡಿ ನಗರದ ನಿವಾಸಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ.

ಆ ಸಂಬಂಧ ಹೈಕೋಮ್ ಎಂಬುವರು ಮಹದೇವಪುರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳಾದ ಲೂಸಿ ಆಡಂ, ಡಾಮಿನಿಕ್ ಅಶ್ವಿನ್ ಹಾಗೂ ರೂಪಾ ಹಂಚಿನಮನಿ ಎಂಬುವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಾಗಿದೆ.

‘ಹೈಕೋಮ್ ಅವರ ಸ್ನೇಹಿತ ಕುಮಾರ್ ಎಂಬುವರಿಗೆ ಸಂದೇಶ ಕಳುಹಿಸಿದ್ದ ಲೂಸಿ ಆಡಂ, ‘ನನ್ನ ಬಳಿ 4.8 ಮಿಲಿಯನ್ (₹48 ಲಕ್ಷ) ಹಣವಿದೆ. ನನ್ನ ಪತಿ ತೀರಿಕೊಂಡಿದ್ದು, ನನಗೂ ಕ್ಯಾನ್ಸರ್ ಕಾಯಿಲೆ ಇದೆ. ಹಣವನ್ನು ನಿಮಗೆ ನೀಡುತ್ತೇನೆ. ದೆಹಲಿಯಲ್ಲಿ ಬ್ರಿಟಿಷ್ ಹೈ ಕಮಿಷನರ್ ಡಾಮಿನಿಕ್ ಅಶ್ವಿತ್ ಎಂಬುವರು ಇದ್ದು, ಹಣ ವರ್ಗಾವಣೆಗೆ ಸಹಾಯ ಮಾಡಲಿದ್ದಾರೆ’ ಎಂದಿದ್ದರು. ಅದನ್ನು ಕುಮಾರ್ ನಂಬಿದ್ದರು‘ ಎಂದು ಪೊಲೀಸರು ಹೇಳಿದರು.

ADVERTISEMENT

‘ಮರುದಿನವೇ ಡಾಮಿನಿಕ್ ಹೆಸರು ಹೇಳಿಕೊಂಡು ಕುಮಾರ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಶುಲ್ಕದ ಹೆಸರಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಆ್ಯಕ್ಸಿಸ್ ಬ್ಯಾಂಕ್‌ಗಳಿಗೆ ಲಕ್ಷಾಂತರ ರೂಪಾಯಿ ಹಾಕಿಸಿಕೊಂಡಿದ್ದಾನೆ. ನಂತರ, ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.