ಬೆಂಗಳೂರು: ಬೃಂದಾವನ ಪ್ರಾಪರ್ಟೀಸ್ ಮಾಲೀಕ ದಿನೇಶ್‌ಗೌಡ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕರ್ನಾಟಕ ಜನಪರ ಸಮಾನ ವೇದಿಕೆ ಆಗ್ರಹಿಸಿದೆ.
2,800ಕ್ಕೂ ಹೆಚ್ಚು ಜನ ಇವರಿಂದ ಮೋಸ ಹೋಗಿದ್ದಾರೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯ ದೊರಕಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಆದರೆ, ತನಿಖೆ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನೊಂದವರು ಪ್ರಶ್ನಿಸಲು ಮುಂದಾದರೆ ಅವರಿಗೆ ದಿನೇಶ್‌ಗೌಡ ಬೆಂಬಲಿಗರ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ವೆಂಕಟರೆಡ್ಡಿ, ಕಾರ್ಯದರ್ಶಿ ರವಿಕುಮಾರ್ ಮತ್ತು ಸತೀಶ್ ಆರೋಪಿಸಿದರು.
ನೆಲಮಂಗಲ, ಹೆಸರಘಟ್ಟ, ಯಂಟಗಾನಹಳ್ಳಿ, ತಾವರೆಕೆರೆ, ಕನಕಪುರ ಹಾಗೂ ವಿವಿಧಡೆ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.