ADVERTISEMENT

ನಿರ್ಮಾಣ ಹಂತದ ಕಟ್ಟಡ ಕುಸಿತ; ದಂಪತಿ, ಮಗು ಸೇರಿ ಐವರ ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 8:43 IST
Last Updated 10 ಜುಲೈ 2019, 8:43 IST
   

ಬೆಂಗಳೂರು:ನಗರದ ಪುಲಿಕೇಶಿ ನಗರ ಬಳಿಯ ಹಚಿನ್ಸ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ಬೇಸಮೆಂಟ್ ಕುಸಿದಿದ್ದರಿಂದಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಂಪತಿ, ಮಗು ಸೇರಿ ಐವರುಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ನಾರಾಯಣ (26), ನಿರ್ಮಲ (20) ಮಗು ಅನುಷ್ಕಾ (3) ಶಂಭು ಕುಮಾರ್ (27)ಖಗನ್ ಸರ್ಕಾರ (48)ಮೃತರು.ಉತ್ತಮ್, ಸಂತೋಷ್, ಉಮೇಶ್, ಅಮಿರ್, ಬೆತ್ತಾಮ್, ರಾಮ್ ಬಾಲಕ, ಮಂಜುದೇವಿ ಗಾಯಗೊಂಡವರು. ಅವರನ್ನುಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ.

ನಾಲ್ಕು ಅಂತಸ್ತಿನ ಸಾಯಿ ಆದಿ‌ ಅಂಬಾಲ್ ಅಪಾರ್ಟ್ಮೆಂಟ್‌ ಬೇಸ್‌ಮೆಂಟ್‌ನಲ್ಲಿ ಅವರು ವಾಸವಿದ್ದರು. ಸ್ಥಳಕ್ಕೆ ಫ್ರೇಜರ್ ಟೌನ್ ಪೊಲೀಸರು ಬಂದಿದ್ದಾರೆ‌.

ADVERTISEMENT
ಸಾಯಿ ಆದಿ‌ ಅಂಬಾಲ್ ಅಪಾರ್ಟ್ಮೆಂಟ್‌

ಬುಧವಾರ ಬೆಳಗ್ಗಿನ ಜಾವ 2.15ರ ಸುಮಾರಿಗೆ ಘಟನೆ ನಡೆದಿದೆ.ಬಿಹಾರ, ರಾಜಸ್ಥಾನ, ನೇಪಾಳ‌ ಮೂಲದವರುಇಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೂರು ಅಂತಸ್ತಿನ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಮತ್ತು ಕಾರ್ಮಿಕರು ವಾಸವಿದ್ದರು.13 ಜನ ವಾಸವಿದ್ದ ಎನ್ನಲಾಗುತ್ತಿದೆ.

ಬಿಬಿಎಂಪಿ ಪೂರ್ವ ವಿಭಾಗದ ಜಂಟಿ ಆಯುಕ್ತರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ನಿರ್ಮಾಣ ಹಂತ ಕಟ್ಟಡ ಇರುವ ಕರೆ ನೀರಿನಾಂಶ ಹೆಚ್ಚಿದೆ. ಮುಂಜಾಗ್ರತ ಕ್ರಮ ವಹಿಸಿಲ್ಲ ಇದರಿಂದಲೇ ದುರ್ಘಟನೆ ನಡೆದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.