ADVERTISEMENT

ಮೆಜೆಸ್ಟಿಕ್‌ನಲ್ಲಿ ಸಡಗರ: ತವರಿಗೆ ತರಳಲು ಧಾವಂತ

​ಪ್ರಜಾವಾಣಿ ವಾರ್ತೆ
Published 19 ಮೇ 2020, 3:46 IST
Last Updated 19 ಮೇ 2020, 3:46 IST
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ   

ಬೆಂಗಳೂರು: ನಗರದಲ್ಲಿ ಮಂಗಳವಾರ ಬೆಳಿಗ್ಗೆ 7ರಿಂದ ಸಾರ್ವಜನಿಕ ಮತ್ತು ಬಸ್ ಸಂಚಾರ ಆರಂಭವಾಗಿದೆ.‌

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜನರ ಸಂಖ್ಯೆ ಹೆಚ್ಚುತ್ತಿದೆ. ಸರದಿಯಲ್ಲಿ ನಿಂತು ಟಿಕೆಟ್, ಪಾಸ್ ಖರೀದಿಸುತ್ತಿರುವ ಪ್ರಯಾಣಿಕರನ್ನು, ಥರ್ಮಲ್ ಸ್ಕ್ರೀನಿಂಗ್ ನಡೆಸಿದ ನಂತರವೇ ಬಸ್ ಏರಲು ಬಿಡಲಾಗುತ್ತಿದೆ. ವ್ಯಕ್ತಿಗತ ಅಂತರ ಕಾಪಾಡಲು ಬಾಕ್ಸ್ ಹಾಕಲಾಗಿದೆ. ಆದರೆ, ಈ ನಿಯಮ ಪಾಲನೆ ಸಾಧ್ಯವಾಗುತ್ತಿಲ್ಲ.ಬಿಎಂಟಿಸಿಯ 2 ಸಾವಿರ, ಕೆಎಸ್‌ಆರ್‌ಟಿಸಿಯ ಒಂದೂವರೆ ಸಾವಿರ ಬಸ್‌ಗಳು ಇಂದು ರಸ್ತೆಗೆ ಇಳಿಯಲಿವೆ.

ಕೆಂಪೇಗೌಡ ‌ನಿಲ್ದಾಣದಲ್ಲಿ ದಟ್ಟಣೆ ನಿಯಂತ್ರಿಸಲು ಮತ್ತು ಸರದಿಯಲ್ಲಿ ಕಾಯುವುದನ್ನು‌ ತಪ್ಪಿಸಲು ಮುಂಗಡ ಟಿಕೆಟ್ ಕಾಯ್ದಿರಿಸುವ ಮೂಲಕ ಪ್ರಯಾಣಿಸುವಂತೆ ನಿಗಮ ಮನವಿ ಮಾಡಿದೆ.

ADVERTISEMENT

ಬಸ್ಸುಗಳು ಶೇ 50ಆಸನಗಳ ಪ್ರಮಾಣದಲ್ಲಿ‌ ಕಾರ್ಯಚರಣೆಯಾಗುತ್ತಿರುವುದರಿಂದ, ಅತ್ಯಧಿಕ ಬಸ್ಸುಗಳು‌ ಕಾರ್ಯಚರಣೆಗೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ ಪ್ರಯಾಣವು ಸುಗಮವಾಗಿರಲಿದೆ ಎಂದೂ ಅದು ಹೇಳಿದೆ. ಮುಂಗಡ ಟಿಕೆಟ್ ಬುಕ್ ಮಾಡಲು ನಿಗಮದ ವೆಬ್‌ಸೈಟ್ www.ksrtc.in ಗೆ ಭೇಟಿ ನೀಡಿ. ಅಥವಾಕಾಲ್‌ಸೆಂಟರ್ 94495 96666 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.