ADVERTISEMENT

ಬೆಂಗಳೂರು ಜಲಮಂಡಳಿ ಅದಾಲತ್‌ ನಾಳೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 20:20 IST
Last Updated 30 ಡಿಸೆಂಬರ್ 2025, 20:20 IST
ಬೆಂಗಳೂರು ಜಲಮಂಡಳಿ ಕಚೇರಿ
ಬೆಂಗಳೂರು ಜಲಮಂಡಳಿ ಕಚೇರಿ   

ಬೆಂಗಳೂರು: ಬೆಂಗಳೂರು ಜಲಮಂಡಳಿಯು ಗುರುವಾರ (ಜ.1) ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಅನ್ನು ಹಮ್ಮಿಕೊಂಡಿದೆ.

ಪೂರ್ವ 1–1 ಉಪವಿಭಾಗದ ಅದಾಲತ್‌ ಬಿಇಎಂಎಲ್‌ ಲೇಔಟ್‌, ಪೂರ್ವ 2–1 ಕಲ್ಯಾಣ ನಗರ, ಆಗ್ನೇಯ 1 ಹಲಸೂರು, ಆಗ್ನೇಯ 4 ಇಂದಿರಾನಗರ ಕ್ಲಬ್‌ ಹಿಂಭಾಗ, ಪಶ್ಚಿಮ 1–1 ವಿಜಯನಗರ 2ನೇ ಹಂತ,  ಪಶ್ಚಿಮ 2–1 ರಾಜರಾಜೇಶ್ವರಿ ನಗರ, ವಾಯವ್ಯ–1 ರಾಜಾಜಿನಗರ ವಿದ್ಯಾವರ್ಧಕ ಶಾಲೆ ಹಿಂಭಾಗ, ವಾಯವ್ಯ–3 ಹೆಸರಘಟ್ಟ ರಸ್ತೆ ಎಂಇಐ ಲೇಔಟ್‌, ಕೇಂದ್ರ 1–1 ಹೈಗ್ರೌಂಡ್ಸ್‌, ಈಶಾನ್ಯ 1 ಮಲ್ಲೇಶ್ವರಂ ಸುವರ್ಣ ಭವನ, ಉತ್ತರ 1–1 ಉಪವಿಭಾಗದ ಅದಾಲತ್‌ ಜಕ್ಕೂರಿನಲ್ಲಿ ನಡೆಯಲಿದೆ.

ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ವಾಟ್ಸ್‌ ಆ್ಯಪ್‌ 8762228888ಕ್ಕೆ ಸಂದೇಶದ ರೂಪದಲ್ಲಿ ದೂರು ನೀಡಬಹುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.