
ಪ್ರಜಾವಾಣಿ ವಾರ್ತೆಬೆಂಗಳೂರು: ಬೆಂಗಳೂರು ಜಲಮಂಡಳಿಯು ವಿವಿಧ ಉಪವಿಭಾಗ ಗಳಲ್ಲಿ ಗುರುವಾರ (ಡಿ.4) ನೀರಿನ ಅದಾಲತ್ ಹಮ್ಮಿಕೊಂಡಿದೆ.
ಬಿಇಎಂಎಲ್ ಲೇಔಟ್, ಕಲ್ಯಾಣ ನಗರ, ಹಲಸೂರು, ಎಚ್ಎಎಲ್, ಆರ್‌ಪಿಸಿ ಲೇಔಟ್, ರಾಜರಾಜೇಶ್ವರಿ ನಗರ, ರಾಜಾಜಿನಗರ, ಹೆಸರಘಟ್ಟ ರಸ್ತೆಯ ಎಂಇಐ ಲೇಔಟ್, ಹೈಗ್ರೌಂಡ್, ಸುವರ್ಣ ಭವನ ಮಲ್ಲೇಶ್ವರಂ, ಜಕ್ಕೂರಿನಲ್ಲಿ ಬೆಳಿಗ್ಗೆ 9.30ರಿಂದ 11ರವರೆಗೆ ಅದಾಲತ್ ನಡೆಯಲಿವೆ.
ನೀರಿನ ಬಿಲ್, ನೀರು ಹಾಗೂ ಒಳಚರಂಡಿ ಸಂಪರ್ಕಿಸುವಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಕುರಿತ ಸಮಸ್ಯೆಗಳಿಗೆ ಅದಾಲತ್‌ನಲ್ಲಿ ಪರಿಹಾರ ಪಡೆಯಬಹುದು. 1916ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಇಲ್ಲವೇ 876228888 ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂದೇಶ ರೂಪದಲ್ಲಿ ದೂರು ದಾಖಲಿಸಬಹುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.