ADVERTISEMENT

BWSSB: ಮನೆಬಾಗಿಲಿಗೆ ತೆರಳಲಿರುವ ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 16:26 IST
Last Updated 24 ಮಾರ್ಚ್ 2025, 16:26 IST
BWSSB
BWSSB   

ಬೆಂಗಳೂರು: ನಗರದಾದ್ಯಂತ ಮಾರ್ಚ್‌ 25ರಿಂದ ಜಲಮಂಡಳಿ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಮನೆಬಾಗಿಲಿಗೆ ತೆರಳಿ ಪ್ರತಿಜ್ಞಾ ವಿಧಿಯ ಪತ್ರಗಳಿಗೆ ಗ್ರಾಹಕರಿಂದ ಸಹಿ ಪಡೆದುಕೊಳ್ಳಲಿದ್ದಾರೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಜಲ ಸಂರಕ್ಷಣೆ ಅಭಿಯಾನದಲ್ಲಿ ಸೋಮವಾರ  ಬಿಎಂಎಸ್ ಮತ್ತು ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ‘ಜಲ ಸಂರಕ್ಷಣೆ, ಹಲ್ಲುಜ್ಜುವಾಗ, ಅಡುಗೆ ಮತ್ತು ಸ್ನಾನ ಮಾಡುವಾಗ, ಬಟ್ಟೆ ತೊಳೆಯುವಾಗ ಕಡಿಮೆ ನೀರು ಬಳಸುತ್ತೇವೆ. ಅಂತರ್ಜಲ ಸಂರಕ್ಷಣೆ, ನೀರು ಸಂಸ್ಕರಿಸಿ ತೋಟಗಳಿಗೆ ಮತ್ತು ವಾಹನಗಳನ್ನು ತೊಳೆಯಲು ಬಳಸುತ್ತೇವೆ. ಜಲ ಮೂಲಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ, ಸುಸ್ಥಿರ ಅಭಿವೃದ್ಧಿಗಾಗಿ ಬದ್ಧನಾಗಿರುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಿ ಅರ್ಜಿಯಲ್ಲಿ ಸಹಿ ಮಾಡಿದರು’ ಎಂದು ರಾಮ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಮಾರ್ಚ್ 21ರಂದು ಈ ಅಭಿಯಾನಕ್ಕೆ ಚಾಲನೆ ನೀಡಿದ್ದು ಮಾರ್ಚ್‌ 28ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.