ADVERTISEMENT

ಕೋವಿಡ್‌ನಿಂದಾಗಿ ಮೂತ್ರಪಿಂಡ ಸಮಸ್ಯೆ ಹೆಚ್ಚಳ: ಡಾ.ನರೇಂದ್ರ

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಡಾ.ಎಸ್. ನರೇಂದ್ರ ಕಳವಳ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 5:52 IST
Last Updated 19 ಮಾರ್ಚ್ 2022, 5:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್‌ ಕಾಣಿಸಿಕೊಂಡ ಬಳಿಕ ಜನರ ಓಡಾಟ ಹಾಗೂ ದೈಹಿಕ ಚಟುವಟಿಕೆಗಳು ಕಡಿಮೆ ಆಗಿವೆ. ಇದರಿಂದಾಗಿಮಧುಮೇಹ ಹಾಗೂ ತೀವ್ರತರ ಬೊಜ್ಜು ಸಮಸ್ಯೆ ಹೊಂದಿರುವವರಲ್ಲಿ ಮೂತ್ರಪಿಂಡ ಸಮಸ್ಯೆಗಳು ಹೆಚ್ಚುತ್ತಿವೆ’ ಎಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಮೂತ್ರಶಾಸ್ತ್ರ ತಜ್ಞ ಡಾ.ಎಸ್. ನರೇಂದ್ರ ಕಳವಳ ವ್ಯಕ್ತಪಡಿಸಿದರು.

ಆಸ್ಪತ್ರೆಯು 12 ವರ್ಷಗಳಲ್ಲಿ640 ಮೂತ್ರಪಿಂಡ ಕಸಿ ನಡೆಸಿದೆ. 2020ರಲ್ಲಿ 39 ಹಾಗೂ 2021ರಲ್ಲಿ 71 ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಈ ಬಗ್ಗೆ ವಿವರಿಸಿದ ಅವರು, ‘ಕಳಪೆ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ಒತ್ತಡದ ಜೀವನ ವಿಧಾನವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.ಜೀವನಶೈಲಿ ಸುಧಾರಣೆ ಮತ್ತು ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಿಂದ ಮೂತ್ರಪಿಂಡ ಸಮಸ್ಯೆ ತಡೆಗಟ್ಟಲು ಸಾಧ್ಯ’ ಎಂದುಡಾ.ಎಸ್. ನರೇಂದ್ರ ಹೇಳಿದರು.

ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಡಾ.ಬಿ.ಟಿ. ಅನಿಲ್ ಕುಮಾರ್, ‘ಕೋವಿಡ್ ಪ್ರಕರಣಗಳು ಗರಿಷ್ಠ ಸಂಖ್ಯೆಗೆ ತಲುಪಿದಾಗ ಅಂಗಾಂಗ ದಾನ ಮತ್ತು ಕಸಿ ಶಸ್ತ್ರಚಿಕಿತ್ಸೆಗೆ ಸಮಸ್ಯೆಯಾಗಿತ್ತು. ಈ ಅವಧಿಯಲ್ಲಿ ಕಸಿ ಪ್ರಮಾಣ ಶೇ 50ರಿಂದ ಶೇ 90ರಷ್ಟು ಇಳಿಕೆಯಾಗಿತ್ತು. ಕಸಿ ಮಾಡಿಸಿಕೊಂಡ ರೋಗಿಗಳು ನಿಯಮಿತವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಳ್ಳುವುದೂ ಕಷ್ಟವಾಗಿತ್ತು. ಇದರಿಂದ ಅನೇಕರಲ್ಲಿ ಮೂತ್ರಪಿಂಡ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಿರುಗಿ, ಮೂತ್ರಪಿಂಡ ವೈಫಲ್ಯವೂ ಸಂಭವಿಸಿದೆ’ ಎಂದುವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.