ADVERTISEMENT

ಬೆಂಗಳೂರಿನಲ್ಲಿ ಕ್ಯಾನ್ಸರ್ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:43 IST
Last Updated 19 ನವೆಂಬರ್ 2021, 16:43 IST

ಬೆಂಗಳೂರು: ‘ದೈಹಿಕ ಸ್ಥಿತಿ ಎಷ್ಟರ ಮಟ್ಟಿಗೆ ಸದೃಢವಾಗಿದೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ’ ಎಂದು ಕ್ಯಾನ್ಸರ್ ತಜ್ಞರಾದ ಡಾ. ನಂದಾ ರಜನೀಶ್ ಹೇಳಿದರು.

ಸ್ಪಾಕ್‌ ವತಿಯಿಂದನಗರದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಆರೋಗ್ಯ ಸ್ಥಿತಿ ಉತ್ತಮವಾಗಿರುವುದು ಎಂದರೆ ಯಾವುದೇ ರೋಗವೂ ಇಲ್ಲವೆಂದು ಭಾವಿಸಬೇಕಿಲ್ಲ. ವಯಸ್ಸಾದಂತೆ ದೈಹಿಕ ಆರೋಗ್ಯ ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ’ ಎಂದರು.

‘ನಮ್ಮ ದೇಹದಲ್ಲಿ ರೋಗಗಳ ವಿರುದ್ಧ ಎಷ್ಟರ ಮಟ್ಟಿಗೆ ರೋಗ ನಿರೋಧಕ ವ್ಯವಸ್ಥೆ ಇದೆ ಹಾಗೂ ಅದನ್ನು ನಾವು ಎಷ್ಟರ ಮಟ್ಟಿಗೆ ನಿರ್ವಹಿಸಿದ್ದೇವೆ ಎನ್ನುವುದರ ಆಧಾರದ ಮೇಲೆ ಆರೋಗ್ಯ ನಿರ್ಧರಿತವಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಮೊಬೈಲ್ ಆ್ಯಪ್ ಮತ್ತು ಡಾ.ನಂದಾ ರಜನೀಶ್ ರಚಿಸಿರುವ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.