ಕೆ.ಆರ್.ಪುರ: ಕೋಲ್ಕತ್ತದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದನ್ನು ಖಂಡಿಸಿ ಬಳಗೆರೆಯ ಶೋಭಾ ಅಪಾರ್ಟ್ ಮೆಂಟ್ ಬಳಿ ಸ್ಥಳೀಯ ನಿವಾಸಿಗಳು, ವೈದ್ಯರು, ಟೆಕಿಗಳು ಸೇರಿ ಮೇಣದ ಬತ್ತಿ ಜೊತೆಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಖಂಡನೀಯ. ಜೀವ ರಕ್ಷಿಸುವ ವೈದ್ಯರ ಮೇಲಿನ ಕೃತ್ಯ ಅಮಾನವೀಯ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಕೃತ್ಯದಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆ ನೀಡಬೇಕು. ಆರೋಪಿಗೆ ನೀಡುವ ಶಿಕ್ಷೆ ತಪ್ಪು ಮಾಡುವ ಪ್ರತಿಯೊಬ್ಬರಿಗೂ ಪಾಠವಾಗುವಂತಿರಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮೆರವಣಿಗೆಯಲ್ಲಿ ಡಾ.ಭಾರತಿ, ಗೀತಾ, ಶಾರದಾ, ಐಶ್ವರ್ಯ, ಚೇತನ್, ಬೃಂದಾ, ಅನಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.