ಬೆಂಗಳೂರು: ‘ಪೌರತ್ವ ಕೊಡುವುದು ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಹೊರತು ಖಾದರ್ ಅವರ ಪಾಕ್ ಸಂಬಂಧಿಗಳಿಗಲ್ಲ’ ಎಂದುಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕುಟಕಿದ್ದಾರೆ.
ಪ್ರವಾಸೋದ್ಯಮ ನೀತಿ ರೂಪಿಸುವ ಸಲುವಾಗಿ ನಗರದ ಅಶೋಕ್ ಹೋಟೆಲ್‌ನಲ್ಲಿ ಹಮ್ಮಿಕೊಂಡ ಅಭಿಪ್ರಾಯ ಸಂಗ್ರಹ ಕಾರ್ಯಾಗಾರದ ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ರಾಜ್ಯ ಹೊತ್ತಿ ಉರಿಯಲಿದೆ’ ಎಂಬ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರ ಹೇಳಿಕೆಗೆ ಇವರು ತಿರುಗೇಟು ನೀಡಿದ್ದಾರೆ.
‘ಬೆಂಕಿ ಹಚ್ಚುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು. ಇದೇ ಮನಸ್ಥಿತಿಯವರೇ ಗೋಧ್ರಾದಲ್ಲಿ ಕರಸೇವಕರಿದ್ದ ರೈಲು ಬೋಗಿಗೆ ಬೆಂಕಿ ಹಚ್ಚಿದವರು. ಅದಕ್ಕೆ ಪ್ರತಿಯಾಗಿ ಹಿಂದೂಗಳೂ ಕೆರಳಿ ನಿಂತರೆ ಏನಾಗುತ್ತದೆ ಎಂಬುದಕ್ಕೂ ಗುಜರಾತ್‌ನಲ್ಲೇ ನಿದರ್ಶನಇದೆ. ಇದನ್ನು ತಿಳಿದುಕೊಂಡು ಖಾದರ್ ಎಚ್ಚರಿಕೆಯಿಂದ ಮಾತನಾಡಲಿ’ ಎಂದರು.
ಸದನಕ್ಕೆ ಬರಲು ಬಿಡುವುದಿಲ್ಲ:ಶಾಸಕ ರೇಣುಕಾಚಾರ್ಯ ಅವರು ಸಹ ಖಾದರ್ ಹೇಳಿಕೆಯನ್ನು ಖಂಡಿಸಿ, ‘ಖಾದರ್ ಅವರು ಸದನಕ್ಕೆ ಬರುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.