ADVERTISEMENT

ಕಾರಿನ ಆಮಿಷವೊಡ್ಡಿ ₹ 46 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 21:35 IST
Last Updated 16 ಜುಲೈ 2020, 21:35 IST

ಬೆಂಗಳೂರು: ಮೊಬೈಲ್ ಸಂಖ್ಯೆಗೆ ಕಾರು ಬಹುಮಾನ ಬಂದಿರುವುದಾಗಿ ಆಮಿಷವೊಡ್ಡಿ ವಿದ್ಯಾರ್ಥಿಯೊಬ್ಬರಿಂದ ₹ 46 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

’ವಂಚನೆ ಸಂಬಂಧ ಶಾಂತಿನಗರ ನಿವಾಸಿಯಾದ ವಿದ್ಯಾರ್ಥಿ ದೂರು ನೀಡಿದ್ದಾರೆ. ಆರೋಪಿ ನಿತೀಶ್ ಕುಮಾರ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿದ್ಯಾರ್ಥಿ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ಆರೋಪಿ, ‘ನಿಮ್ಮ ಮೊಬೈಲ್‌ ನಂಬರ್‌ಗೆ ₹16 ಲಕ್ಷ ಮೌಲ್ಯದ ಕಾರು ಬಹುಮಾನ ಬಂದಿದೆ. ನೋಂದಣಿ ಶುಲ್ಕ, ವಿಮೆ ಕಂತು ಹಾಗೂ ಸಾರಿಗೆ ವೆಚ್ಚ ಪಾವತಿಸಿದರೆ, ಕಾರನ್ನು ನೀಡುತ್ತೇವೆ’ ಎಂದಿದ್ದ. ಅದನ್ನು ನಂಬಿದ್ದ ವಿದ್ಯಾರ್ಥಿ, ಹಂತ ಹಂತವಾಗಿ ₹ 46 ಸಾವಿರ ಪಾವತಿಸಿದ್ದರು. ಅದಾದ ನಂತರ ಆರೋಪಿ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.