ADVERTISEMENT

ಫೆ.8ರಿಂದ ‘ಬ್ರೆಡ್‍ಕ್ರಂಬ್ಸ್’ ವ್ಯಂಗ್ಯಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 20:15 IST
Last Updated 4 ಫೆಬ್ರುವರಿ 2020, 20:15 IST
   
""
""
""

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಮುಂಬೈ ವ್ಯಂಗ್ಯಚಿತ್ರಕಾರ ಶೌನಕ್ ಸಂವತ್ಸರ ಅವರ ಆಯ್ದ ವ್ಯಂಗ್ಯಚಿತ್ರಗಳ ಪ್ರದರ್ಶನ ‘ಬ್ರೆಡ್‍ಕ್ರಂಬ್ಸ್’ ಆಯೋಜಿಸಿದೆ. ಫೆಬ್ರವರಿ 8ರಿಂದ 22ರವರೆಗೆ ಪ್ರದರ್ಶನ ನಡೆಯಲಿದೆ.

ಶೌನಕ್ಅವರು ಪ್ರತಿಷ್ಠಿತ ಐಡಿಸಿ ಐಐಟಿಬಿ ಸಂಸ್ಥೆಯಿಂದ ‘ಎನಿಮೇಷನ್ ಡಿಸೈನ್’ನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್‌ ಪದವಿಯನ್ನು ಗಳಿಸಿದ್ದಾರೆ. ಅವರು ರಾಜಕೀಯ ಮತ್ತು ಪಾಕೆಟ್ ವ್ಯಂಗ್ಯಚಿತ್ರ, ಗ್ಯಾಗ್ ಕಾಮಿಕ್ಸ್, ಗ್ರಾಫಿಕ್ ನಾವೆಲ್ಸ್, ಎನಿಮೇಷನ್ ಡಿಸೈನ್‌ನಲ್ಲಿ ಪಳಗಿದ್ದಾರೆ.

ಶೌನಕ್

ಅವರಿಗೆ ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆ 2017ರ ಆಯ್ಕೆ ಸಮಿತಿಯ ವಿಶೇಷ ಪ್ರಶಸ್ತಿ ಲಭಿಸಿದೆ. ಅವರು ‘ ಫುಸ್ಕುಮನ್’ ಎಂಬ ಗ್ಯಾಗ್ ಕಾಮಿಕ್ಸ್ ಈಗಾಗಲೇ ‘ಟಿಂಕಲ್ ಕಾಮಿಕ್ಸ್’ ನಲ್ಲಿ ಬಹಳ ಜನಪ್ರಿಯವಾಗಿದೆ. ಅವರು 2018ರಲ್ಲಿ ಒಂದು ಗ್ರಾಫಿಕ್ ನಾವೆಲ್ ಕೂಡ ಪ್ರಕಾಶಿಸಿದ್ದಾರೆ.

ADVERTISEMENT

ಪ್ರದರ್ಶನವನ್ನು ಬಾರ್ಟನ್ ಸನ್ಸ್ ಮತ್ತು ಕಂ ಪ್ರೈ ಲಿ. ಮ್ಯಾನೇಜಿಂಗ್‌ ಡೈರೆಕ್ಟರ್‌ ಭರತ್‌ ಎಂ. ಮೆಹತಾ ಅವರು ಉದ್ಘಾಟಿಸಲಿದ್ದಾರೆ.

ಸ್ಥಳ:ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ. 1 ಮಿಡ್ ಫೋರ್ಡ್‌ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ. ಸಮಯ:ಬೆಳಿಗ್ಗೆ 10ರಿಂದ ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.