ADVERTISEMENT

ನಗರ ಸುರಕ್ಷತೆಗೆ ಸಾವಿರ ಕಣ್ಣು

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:14 IST
Last Updated 4 ಜುಲೈ 2018, 19:14 IST
   

ಬೆಂಗಳೂರು: ಹೆಚ್ಚುತ್ತಿರುವ ಅಪರಾಧ ಕೃತ್ಯಗಳು, ಮಹಿಳೆಯರ ಸುರಕ್ಷತೆ, ಪುಂಡರ ಹಾವಳಿ, ಆತಂಕಕಾರಿ ವಾತಾವರಣ ನಿವಾರಿಸಲು ಕೇಂದ್ರ ಸರ್ಕಾರ ಸುರಕ್ಷಿತ ನಗರ ಯೋಜನೆ ರೂಪಿಸಿ ಅದಕ್ಕೆ ಬೇಕಾದ ಅನುದಾನವನ್ನೂ ಮಂಜೂರು ಮಾಡಿದೆ. ಈ ಯೋಜನೆ ಅಡಿ ಸಾವಿರಾರು ಸಿಸಿ ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ ಯಂತ್ರಗಳು ನಗರದ ಕಾವಲು ನಡೆಸಲಿವೆ. ಸುರಕ್ಷಿತ ನಗರ ಯೋಜನೆ ಏನು? ಎತ್ತ? ಒಂದು ನೋಟ...

₹ 667 ಕೋಟಿ - ಯೋಜನೆ ಅನುಷ್ಠಾನದ ಮೊತ್ತ

ಶೇ 60;40 -ಅನುದಾನ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಅನುಪಾತ

ADVERTISEMENT

(ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ನಿರ್ಭಯಾ’ ನಿಧಿಯಿಂದ ಮಂಜೂರು)

10 ಸಾವಿರ -ಸಿಸಿ ಕ್ಯಾಮೆರಾಗಳ ಕಣ್ಗಾವಲು.

4,522 -ಜಂಕ್ಷನ್‌ಗಳಲ್ಲಿ ಕ್ಯಾಮೆರಾ ಅಳವಡಿಕೆ

2,714 ಕಿಲೋಮೀಟರ್‌ -ಕ್ಯಾಮೆರಾ ಕಾವಲು ವ್ಯಾಪ್ತಿಯ ಪ್ರದೇಶ

(ಕೃತಕ ಬುದ್ಧಿಮತ್ತೆಯ ಯಂತ್ರಗಳು ಮಾನವ ವರ್ತನೆಯ ಮೇಲೆ ನಿಗಾ ವಹಿಸಲಿವೆ. ಒಂದೆಡೆ ಜನ ಗುಂಪು ಸೇರುತ್ತಿರುವುದು ಹೆಚ್ಚುತ್ತಿದ್ದಂತೆಯೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿವೆ. ‘ಸ್ಮಾರ್ಟ್‌ ಐ’ ಹೆಸರಿನಲ್ಲಿ ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ ವ್ಯವಸ್ಥೆ ಜತೆಯಾಗಿ ಕೆಲಸ ಮಾಡುತ್ತವೆ)

* ಆಯ್ಕೆಯಾದ ಇತರ ನಗರಗಳು

ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್‌, ಅಹಮದಾಬಾದ್‌ ಮತ್ತು ಲಕ್ನೊ

ಯೋಜನೆಯ ಪ್ರಸ್ತಾವದಲ್ಲಿರುವುದು

* ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಗಮನಿಸಲು ಸರ್ಕಾರೇತರ ಸಂಘಟನೆಗಳ ಸ್ವಯಂ ಸೇವಕರನ್ನು ನೇಮಿಸುವುದು

* ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರ ಸ್ಥಾಪನೆ

* ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಘಟಕ ಸ್ಥಾಪನೆ

* ಸೂಕ್ಷ್ಮ ಮತ್ತು ನಿರ್ಜನ ಪ್ರದೇಶಗಳಲ್ಲಿ ಮಹಿಳಾ ಪೊಲೀಸ್‌ ಹೊರ ಠಾಣೆ ಸ್ಥಾಪನೆ

* ಸಾರ್ವಜನಿಕರಲ್ಲಿ ಸಂವೇದನೆ ಮೂಡಿಸಲು ರಾಣಿ ಚೆನ್ನಮ್ಮ ತಂಡಗಳ ರಚನೆ

2,623 -(2017ರಲ್ಲಿ ಮಹಿಳೆಯರ ವಿರುದ್ಧ ನಡೆಸಿದ ಅಪರಾಧ ಪ್ರಕರಣಗಳು)

2,345 - (2016ರಲ್ಲಿ ದಾಖಲಾದ ಪ್ರಕರಣಗಳು)

2,370 -(2015ರಲ್ಲಿ ದಾಖಲಾದ ಪ್ರಕರಣಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.