ADVERTISEMENT

ಎಂ.ಗಣೇಶ್‌, ಶಕೀಲ್‌ ಅಹಮದ್‌ಗೆ ‘ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 17:08 IST
Last Updated 30 ಜನವರಿ 2026, 17:08 IST
ಗಣೇಶ್‌
ಗಣೇಶ್‌   

ಬೆಂಗಳೂರು: ಸೆಂಟರ್ ಸ್ಟೇಜ್‌ ಸಂಸ್ಥೆಯು ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಅವರ ಹೆಸರಿನಲ್ಲಿ ನೀಡುವ 2026ನೇ ಸಾಲಿನ ಸೆಂಟರ್‌ ಸ್ಟೇಜ್‌–ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗದ ನಟ, ನಿರ್ದೇಶಕ ಎಂ.ಗಣೇಶ್‌ ಅವರನ್ನು ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.

ವಿಜಯಪುರದ ಶಕೀಲ್‌ ಅಹಮದ್‌ ಅವರನ್ನು ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ADVERTISEMENT

ಫೆ.13ರ ಸಂಜೆ 6ಕ್ಕೆ ನಗರದ ನಯನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

ಶಕೀಲ್‌ ಅಹಮದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.