ADVERTISEMENT

ಸಿಇಟಿ: ನಗರ ವಿದ್ಯಾರ್ಥಿಗಳ ಸಾಧನೆ

ಭೌತವಿಜ್ಞಾನ– ಗಣಿತದಲ್ಲಿ ಪೂರ್ಣ ಅಂಕ ಗಳಿಸಿದವರು ಒಬ್ಬರೂ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 21:03 IST
Last Updated 21 ಆಗಸ್ಟ್ 2020, 21:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೃತ್ತಿಶಿಕ್ಷಣ ಕೋರ್ಸ್‌ ಪ್ರವೇಶಕ್ಕೆ ನಡೆದ ಸಿಇಟಿಯಲ್ಲಿ ನಗರದ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ನಗರದ ಚೈತನ್ಯ ಟೆಕ್ನೊ ಸ್ಕೂಲ್, ಆರ್.ವಿ. ಪಿಯು ಕಾಲೇಜು, ವಿದ್ಯಾಮಂದಿರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮೊದಲ ಐದು ರ‍್ಯಾಂಕ್‌ ಗಳಿಸಿರುವವರ ಪಟ್ಟಿಯಲ್ಲಿದ್ದಾರೆ.

ಚೈತನ್ಯ ಟೆಕ್ನೊ ಸ್ಕೂಲ್ ನ ಜೆಪಿ ನಗರ ಶಾಖೆಯ ಶುಭನ್‌ ಎಂಜಿನಿಯರಿಂಗ್‌ನಲ್ಲಿ 2ನೇ ರ‍್ಯಾಂಕ್‌ ಪಡೆದಿದ್ದರೆ, ಎಸ್.ಶ್ರೀವಾಸ 7ನೇ ರ‍್ಯಾಂಕ್ ಪಡೆದಿದ್ದಾರೆ.

ಉನ್ನತ ರ‍್ಯಾಂಕ್ ಪಡೆದಿದ್ದರೂ, ಯಾವ ವಿದ್ಯಾರ್ಥಿಯೂ ಗಣಿತ ಮತ್ತು ಭೌತವಿಜ್ಞಾನದಲ್ಲಿ 60ಕ್ಕೆ 60 ಅಂಕಗಳಿಸಲು ಸಾಧ್ಯವಾಗಿಲ್ಲ.

ADVERTISEMENT

‘ಭೌತವಿಜ್ಞಾನ ಮತ್ತು ಗಣಿತ ಪತ್ರಿಕೆ ಬರೆಯುವಾಗ ಸಮಯ ಸಾಕಾಗಲಿಲ್ಲ. ಪ್ರಶ್ನೆ ಅರ್ಥ ಮಾಡಿಕೊಳ್ಳಲು ಕಷ್ಟವಾ ಯಿತು’ ಎನ್ನುತ್ತಾರೆ ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಗಳಿಸಿ ರುವ ಆರ್.ವಿ. ಪಿಯು ಕಾಲೇಜಿನ
ಎಂ. ರಕ್ಷಿತ್.

‘ಭೌತವಿಜ್ಞಾನದಲ್ಲಿ ಅನ್ವಯಿಕ ಪ್ರಶ್ನೆ ಹೆಚ್ಚಿದ್ದವು. ನಾಲ್ಕು ಆಯ್ಕೆಗಳ ನಡುವೆ ಹೋಲಿಕೆ ಹೆಚ್ಚಿದ್ದು, ಸರಿ ಉತ್ತರ ಕಂಡುಹಿಡಿಯಲು ಕಷ್ಟವಾಯಿತು’ ಎನ್ನುತ್ತಾರೆ ಕೃಷಿವಿಜ್ಞಾನ ವಿಭಾಗದಲ್ಲಿ ಐದನೇ ರ‍್ಯಾಂಕ್‌ ಪಡೆದ ವಿದ್ಯಾಮಂದಿರ ಕಾಲೇಜಿನ‍ಪ್ರಜ್ವಲ್ ಕಶ್ಯಪ್.

ವಿದ್ಯಾರ್ಥಿಗಳಲ್ಲಿ ಗೊಂದಲ
ನೀಟ್ ಮತ್ತು ಜೆಇಇ ಫಲಿತಾಂಶದ ನಂತರವೇ ಕೌನ್ಸೆಲಿಂಗ್‌ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ. ಆದರೆ, ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ತಮ್ಮದೇ ವೇಳಾಪಟ್ಟಿ ಹಾಕಿಕೊಂಡಿದ್ದು, ವಾರದೊಳಗೆ ಕೌನ್ಸೆಲಿಂಗ್‌ ನಡೆಸಲಿವೆ.ಇವು ಈ ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಿದ್ದು, ಫಲಿತಾಂಶವನ್ನೂ ಘೋಷಿಸಿವೆ. ಸರ್ಕಾರ ಕೌನ್ಸೆಲಿಂಗ್‌ ನಡೆಸು ವವರಿಗೂ ಇವು ಕಾಯುವುದಿಲ್ಲ. ಈ ಕಾಲೇಜುಗಳಲ್ಲಿಯೇ ಸೀಟು ಆಯ್ಕೆ ಮಾಡಿಕೊಳ್ಳಬೇಕೇ ಅಥವಾ ಕೆಇಎ ಕೌನ್ಸೆಲಿಂಗ್‌ ವರೆಗೂ ಕಾಯಬೇಕೆ ಎಂಬ ಗೊಂದಲ ವಿದ್ಯಾರ್ಥಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.