ADVERTISEMENT

ವರ್ತೂರು: ಚನ್ನರಾಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 17:50 IST
Last Updated 25 ಜನವರಿ 2026, 17:50 IST
ವರ್ತೂರಿನಲ್ಲಿ ನಡೆದ ಚನ್ನರಾಯಸ್ವಾಮಿ ಬ್ರಹ್ಮರಥೋತ್ಸವದ ವೇಳೆ ಭಕ್ತರು ಪಾಲ್ಗೊಂಡಿದ್ದರು
ವರ್ತೂರಿನಲ್ಲಿ ನಡೆದ ಚನ್ನರಾಯಸ್ವಾಮಿ ಬ್ರಹ್ಮರಥೋತ್ಸವದ ವೇಳೆ ಭಕ್ತರು ಪಾಲ್ಗೊಂಡಿದ್ದರು   

ಕೆ.ಆರ್.ಪುರ: ರಥಸಪ್ತಮಿ ಪ್ರಯುಕ್ತ ವರ್ತೂರಿನಲ್ಲಿ ಶ್ರೀ ಭೂನಿಳಾ ಸಮೇತ ಚನ್ನರಾಯಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ದೇವಾಲಯದಲ್ಲಿ ಚನ್ನರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ನಂತರ ರಥದಲ್ಲಿ ಕೂರಿಸಿ ಅಲಂಕರಿಸಿ ರಥ ಎಳೆಯಲಾಯಿತು.

ರಥೋತ್ಸವ ಅಂಗವಾಗಿ ಚನ್ನರಾಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪೂಜಾ ಕೈಂಕರ್ಯಗಳು ನಡೆದವು. ವರ್ತೂರಿನ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಾಗಿತು. ಈ ಉತ್ಸವದಲ್ಲಿ ತಮಟೆ, ಪೂಜಾಕುಣಿತ, ನಾದಸ್ವರ, ಚಿಂಗಾರಿ ಮೇಳ, ಚಂಡಿ ಮೇಳ, ಚಟ್ಟಿಮೇಳ, ವೀರಗಾಸೆ, ಗಾರುಡಿಗೊಂಬೆ, ಡೊಳ್ಳು ಕುಣಿತ ಗಮನಸೆಳೆಯಿತು.

ADVERTISEMENT

ರಥೋತ್ಸವಕ್ಕೆ ಸುತ್ತಮುತ್ತಲಿನ ವೈಟ್ ಫೀಲ್ಡ್, ಬಳಗೆರೆ, ಸೊರುಹುಣಸೆ, ಗುಂಜೂರು, ವಾಲೇಪುರ, ಮಧುರನಗರ,  ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಮಂಜುಳಾ ಲಿಂಬಾವಳಿ, ‌ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಎಚ್.ನಾಗೇಶ್, ಮುಖಂಡರಾದ ಕುಪ್ಪಿ ಮಂಜುನಾಥ್, ವರ್ತೂರು ಶ್ರೀಧರ್, ಮಹೇಂದ್ರ ಮೋದಿ, ಶ್ರೀಧರ್ ರೆಡ್ಡಿ, ಹೂಡಿ ಪಿಳ್ಳಪ್ಪ, ಮನೋಹರ್ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.