ADVERTISEMENT

ಬಾಲಕಿಗೆ ಮದುವೆ; ತಾಯಿ, ಮಾವನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 18:53 IST
Last Updated 1 ನವೆಂಬರ್ 2020, 18:53 IST

ಬೆಂಗಳೂರು: ಹತ್ತು ವರ್ಷದ ಬಾಲಕಿಗೆ ಬಾಲ್ಯ ವಿವಾಹ ಮಾಡಲಾಗಿದ್ದು, ಆಕೆಯ ತಾಯಿ ಹಾಗೂ ಸೋದರ ಮಾವನ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಬಾಲ್ಯ ವಿವಾಹ ಸಂಬಂಧ ‘ಚೈಲ್ಡ್ ಲೈನ್ ಟೀಮ್ ಅಸೋಸಿಯೇಷನ್’ ಸಂಸ್ಥೆ ಸದಸ್ಯೆ ಅರುಣಾ ಕುಮಾರಿ ಎಂಬುವರು ದೂರು ನೀಡಿದ್ದಾರೆ. ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಬಾಲಕಿಯ ತಾಯಿ ಹಾಗೂ ಬಾಲಕಿಯನ್ನು ಮದುವೆಯಾಗಿದ್ದ ಸೋದರ ಮಾವ ರವಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಾಲಕಿ ಪೋಷಕರು, ಆಂಧ್ರಪ್ರದೇಶದವರು. ಕೂಲಿ ಕೆಲಸ ಮಾಡಲು ನಗರಕ್ಕೆ ಬಂದಿದ್ದರು. ಬಾಲಕಿ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಆಕೆಗೆ ವರ್ಷದ ಹಿಂದೆಯೇ ಬಲವಂತದಿಂದ ಮದುವೆ ಮಾಡಿಸಲಾಗಿತ್ತು. ಸಂಸ್ಥೆಯ ಸದಸ್ಯರು ಇತ್ತೀಚೆಗೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮದುವೆ ವಿಷಯ ಗೊತ್ತಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಬಾಲಕಿಯನ್ನು ರಕ್ಷಿಸಿ ಮಂಡೂರಿನ ವಸತಿ ನಿಲಯದಲ್ಲಿ ಇರಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.