
ಬೆಂಗಳೂರು: ಬಾಷ್ ಸಂಸ್ಥೆಯ ಮೈಕೊ ಕನ್ನಡ ಬಳಗ ಸಂಶೋಧನಾ ಕ್ಷೇತ್ರಕ್ಕೆ ನೀಡುವ 2025ನೇ ಸಾಲಿನ ರೆ.ಫೆ. ಕಿಟೆಲ್ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎನ್. ಚಿನ್ನಸ್ವಾಮಿ ಸೋಸಲೆ ಹಾಗೂ ಸಾಹಿತಿಗಳಿಗೆ ನೀಡುವ ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ಗೆ ಎಸ್.ಎಲ್. ವರಲಕ್ಷ್ಮಿ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಇದೇ 19ರಂದು ಮಧ್ಯಾಹ್ನ 1.30ಕ್ಕೆ ಬಿಡದಿ ಘಟಕದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ದತ್ತಾತ್ರಿ ಸಾಲಗಾಮೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೆ.ಎಸ್. ರಾಜಣ್ಣ ಅತಿಥಯಾಗಿ ಭಾಗವಹಿಸಲಿದ್ದು, ಬಳಗದ ಗೌರವ ಅಧ್ಯಕ್ಷೆ ಪದ್ಮಿನಿ ನಾಗರಾಜು, ಮೈಕೊ ಎಂಪ್ಲಾಯೀಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶಗೌಡ, ಬಳಗದ ಅಧ್ಯಕ್ಷ ರಾಮತೀರ್ಥ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.