ADVERTISEMENT

ಕೋವಿಡ್‌ ಪ್ರಕರಣಗಳು 100ಕ್ಕಿಂತ ಕಡಿಮೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 17:38 IST
Last Updated 18 ಅಕ್ಟೋಬರ್ 2021, 17:38 IST

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯ ಇಳಿಕೆ ಕಂಡಿವೆ. ಸೋಮವಾರ 83 ಮಂದಿಗೆ ಸೋಂಕು ತಗುಲಿರುವುದು ಖಾತರಿಯಾಗಿದೆ. ರಾಜ್ಯದಲ್ಲಿ ಎರಡನೇ ಅಲೆ ಕಾಣಿಸಿಕೊಂಡ ನಂತರ ವರದಿಯಾದ ಅತಿ ಕಡಿಮೆ ಪ್ರಕರಣ ಇದಾಗಿದೆ.

ಈ ವರ್ಷದ ಮಾರ್ಚ್‌ ಮೂರನೇ ವಾರದಲ್ಲಿ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡಿತ್ತು. ಬಳಿಕ ಹೊಸ ಪ್ರಕರಣಗಳು ಏರುಗತಿ ಪಡೆದುಕೊಂಡಿದ್ದವು. ಹೀಗಾಗಿ ಆಮ್ಲಜನಕದ ಅಭಾವ ಸೃಷ್ಟಿಯಾಗಿತ್ತು. ಆಮ್ಲಜನಕ ಸಹಿತ ಹಾಸಿಗೆಗಳ ಸಮಸ್ಯೆಯೂ ತಲೆದೋರಿತ್ತು. ಆಗಸ್ಟ್‌ ಬಳಿಕ ಇತರ ಜಿಲ್ಲೆಗಳಲ್ಲಿ ಪ್ರಕರಣಗಳು ಕಡಿಮೆಯಾದರೂ ಬೆಂಗಳೂರಿನಲ್ಲಿ ಮಾತ್ರ ಸಾವಿರದ ಆಸುಪಾಸಿನಲ್ಲೇ ಇದ್ದವು. ಸೆಪ್ಟೆಂಬರ್‌ ನಂತರ ಹೊಸ ಪ್ರಕರಣಗಳು ಇಳಿಮುಖವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT